ಬಿ.ಸಿ.ಎ ಯಲ್ಲಿ ವಿವೇಕಾನಂದಕ್ಕೆ ಶೇ.100 ಫಲಿತಾಂಶ
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಎಪ್ರಿಲ್/ ಮೇ ತಿಂಗಳಿನಲ್ಲಿ ನಡೆಸಿದ ಪದವಿ ಪರೀಕ್ಷೆಗಳಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿನ ಬಿ.ಸಿ.ಎ ವಿಭಾಗವು 100 ಶೇಕಡಾ ಫಲಿತಾಂಶವನ್ನು ದಾಖಲಿಸಿದೆ. ವಿಭಾಗದ 41 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಬಿ.ಎ. ವಿಭಾಗದಲ್ಲಿ 132 ಮಂದಿ ಪರೀಕ್ಷೆ ಬರೆದು ೧೬೮ ಜನ ತೇರ್ಗಡೆ ಹೊಂದುವುದರ ಮುಖೇನ ೯೭.೬೭ ಫಲಿತಾಂಶ ದೊರಕಿದ್ದರೆ ಬಿ.ಎಸ್ಸಿ ವಿಭಾಗದಲ್ಲಿ ೧೫೮ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು ೧೫೦ ಮಂದಿ ಉತ್ತೀರ್ಣತೆ ಹೊಂದಿ ೯೪.೯೪ ಫಲಿತಾಂಶ ಪ್ರಾಪ್ತವಾಗಿದೆ. ಇದಲ್ಲದೆ ಬಿಕಾಂ ವಿಭಾಗದಲ್ಲಿ ೩೫೮ ಮಂದಿ ಪರೀಕ್ಷೆ ಬರೆದು ೩೧೧ ಮಂದಿ ಉತ್ತೀರ್ಣರಾಗಿ ೯೬.೮೭ ಶೇಕಡಾ ಹಾಗೂ ಬಿ.ಬಿ.ಎಂ ನಲ್ಲಿ 112 ಮಂದಿ ವಿದ್ಯಾರ್ಥಿಗಳಲ್ಲಿ 73 ಮಂದಿ ಪದವಿ ಪೂರೈಸಿ 85 ಫಲಿತಾಂಶ ದೊರೆತಿದೆ. ಇದರೊಂದಿಗೆ ಕಾಲೇಜು 2014-15ನೇ ಸಾಲಿನಲ್ಲಿ ಒಟ್ಟು 88.34 ಶೇಕಡಾ ಫಲಿತಾಂಶ ಪಡೆದಿದೆ.