ವಿವೇಕಾನಂದದ 9 ಜನ ವಿದ್ಯಾರ್ಥಿಗಳು ವಿಪ್ರೋಕ್ಕೆ ಆಯ್ಕೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ೯ ಜನ ಬಿಎಸ್ಸಿ ವಿದ್ಯಾರ್ಥಿಗಳು ವಿಪ್ರೋ (ವೇಸ್ ಅಂಡ್ ವಿಸ್ತಾ) ಕಂಪೆನಿಯವರು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಅಂತಿಮ ವರ್ಷದ ಬಿಎಸ್ಸಿ ಪದವಿಯ ಸ್ಮಿತಾ ವಾಗ್ಳೆ, ಕಾವ್ಯ ಎಂ.ಎಸ್, ಅಶ್ವಿನ್ ಎ.ಜೆ, ಸ್ಮಿತಾ ಕೆ, ಅನುಪಮಾ ಬಿ, ನೂರ್‍ಜಾನ್ ಬೇಗಂ, ಸನತ್, ಅಜಯ್ ಕೃಷ್ಣ ಮತ್ತು ನವ್ಯತಾ ಪಿ ಆಯ್ಕೆಯಾದ ವಿದ್ಯಾರ್ಥಿಗಳು.
ಕ್ಯಾಂಪಸ್ ಸಂದರ್ಶನಕ್ಕಾಗಿ ವಿವೇಕಾನಂದ ಖಾಲೇಜಿನಿಂದ ಮಾತ್ರವಲ್ಲದೆ ಫಿಲೋಮಿನ ಕಾಲೇಜು ಪುತ್ತೂರು, ಎನ್.ಎಂ.ಸಿ ಸುಳ್ಯ, ಮಂಗಳೂರಿನ ಭಾರತಿ ಕಾಲೇಜು, ಮಂಗಳೂರು ವಿವಿಯ ಎಂ.ಎಸ್ಸಿ ವಿದ್ಯಾರ್ಥಿಗಳು, ಬಲ್ಮಠ, ಬೆಟ್ಟಂಪಾಡಿ, ಉಪ್ಪಿನಂಗಡಿ, ಕಾರ್‌ಸ್ಟ್ರೀಟ್, ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ಸುಂಆರು ೧೦೦ ಜನ ವಿದ್ಯಾರ್ಥಿಗಳು ಭಾಗವಿಸಿದ್ದರು. ಅಂತಿಮವಾಗಿ ವಿವೇಕಾನಂದ ಕಾಲೇಜಿನ ೯ ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು ೧೩ ಮಂದಿ ಆಯ್ಕೆಯಾದರು. ಎನ್.ಎಂ.ಸಿ.ಸುಳ್ಯದ ವಿದ್ಯಾರ್ಥಿಗಳಾದ ಸ್ವಾತಿ ಜಿ.ಎನ್, ಸುನೆಹೋ ಖಾನಮ್, ಮಂಗಳೂರು ವಿವಿ ಎಂಎಸ್‌ಸಿ ವಿಣಾಗದ ಅಖಿಲಾ ಯು ಹಾಗೂ ಬಲ್ಮಠ ಸರ್ಕಾರಿ ಕಾಲೇಜಿನ ವಿನುತಾ ಆಯ್ಕೆಯಾದ ಇತರ ವಿದ್ಯಾರ್ಥಿಗಳು