ವಿವೇಕಾನಂದ ಕಾಲೇಜಿನ ಚೆಸ್ ಪಂದ್ಯಾಟದಲ್ಲಿ ನಿಹಾಲ್ಗೆ ಬಹುಮಾನ
ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಶ್ರಯದಲ್ಲಿ ೩೫ನೇ ಬಾರಿಗೆ ಸಂಘಟಿಸಲ್ಪಟ್ಟ ಮಾನ್ಸೂನ್ ಚೆಸ್ ಸ್ಫರ್ಧೆಯ ಪ್ರಥಮ ಸ್ಥಾನವನ್ನು ಸತತ ಮೂರನೇ ವರ್ಷ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿಹಾಲ್ ಮಂಜುನಾಥ್ ಪಡೆದುಕೊಂಡರು. ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಕ್ರಮವಾಗಿ ಕೆನರಾ ಕಾಲೇಜು, ಮಂಗಳೂರಿನ ಸಂಜಿತ್ ಶೆಣೈ ಹಾಗೂ ಆರ್ ಸೂರಜ್ ಪ್ರಭು ಪಡೆದುಕೊಂಡರು.
ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆ ವ್ಯಾಪ್ತಿಯ ಪದವಿ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜು ಸೇರಿದಂತೆ ಒಟ್ಟು ೨೦ ಕಾಲೇಜುಗಳ ೧೧೦ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟು ಒಂಭತ್ತು ಸುತ್ತುಗಳ ಸ್ವಿಸ್ ಮಾದರಿಯಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ ೨೫ ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಉತ್ತಮ ಮೂರು ಜನ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಪಡೆದವರೆಂದರೆ ಅಪೂರ್ವ ರೈ ವಿವೇಕಾನಂದ ಕಾಲೇಜು, ಪುತ್ತೂರು, ಸ್ವಾತಿ ಶೆಟ್ಟಿ ಆಳ್ವಾಸ್ ಕಾಲೇಜು, ಮೂಡಬಿದ್ರೆ, ಭಾವನ ಎಮ್ ಕೆ ಸಂತ ಫಿಲೋಮಿನಾ ಪುತ್ತೂರು.
ಉತ್ತಮ ೧೦ ಆಟಗಾರ ಪ್ರಶಸ್ತಿಗಳಿಸಿದ ಇತರರೆಂದರೆ ನಿಖಿಲ್ ಹೆಬ್ಬಾರ್ ಎಮ್ ಮಣಿಪಾಲ್., ಗೌತಮ್ ವಿವೇಕಾನಂದ ಪುತ್ತೂರು, ಮೊಹಮ್ಮದ್ ಅಜರುದ್ದೀನ್ ಕೆನರಾ ಇಂಜಿನಿಯರಿಂಗ್ ಮಂಗಳೂರು, ದೇವದಾಸ್ ಪೈ ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ, ಕಾರ್ತಿಕ್ ಭಟ್ ಸಹ್ಯಾದ್ರಿ ಇಂಜಿನಿಯರಿಂಗ್ ಮಂಗಳೂರು, ಪ್ರಸನ್ನ ವಿ ಹೆಗ್ಡೆ ಉಪೇಂದ್ರ ಪೈ ಉಡುಪಿ, ಅನಂತ ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ,
ವಿಜೇತರಿಗೆ ಟ್ರೋಫಿ ಹಾಗೂ ಎಲ್ಲಾ ಸುತ್ತುಗಳಲ್ಲಿ ಸ್ಪರ್ಧಿಸಿದ ಆಟಗಾರರಿಗೆ ಭಾಗವಹಿಸಿದ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿದ ಚೆಸ್ ಆಟಗಾರ ಸೂರ್ಯನಾರಾಯಣ ಎನ್ ಕೆ ವಕೀಲರು, ಪುತ್ತೂರು, ಇವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಮಾಧವ ಭಟ್ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಸ್ವಾತಿ ಎಸ್ ಎಲ್ ಸ್ವಾಗತಿಸಿದರು, ಪ್ರಜ್ವಲ್ ಧನ್ಯವಾದ ಸಮರ್ಪಿಸಿದರು, ಉಪನ್ಯಾಸಕ ಅತುಲ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್ ಮತ್ತು ಡಾ. ಜ್ಯೋತಿ ಮನಮೋಹನ್ ಟೂರ್ನ್ಮೆಂಟನ್ನು ಸಂಯೋಜಿಸಿದರು. ಪ್ರಸನ್ನ ರಾವ್ ಮಂಗಳೂರು, ಇವರು ಮುಖ್ಯ ತೀರ್ಪುಗಾರರಾಗಿ ಸಹಕರಿಸಿದರು.