ವಿವೇಕಾನಂದದ ಬಿಸಿಎ ವಿಭಾಗದಲ್ಲಿ ಶೇ.೧೦೦ ಫಲಿತಾಂಶ ದಾಖಲು
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯವು ಎಪ್ರಿಲ್ ೨೦೧೪ರಲ್ಲಿ ನಡೆಸಿದ ವಾರ್ಷಿಕ ಪರೀಕ್ಷೆಗಳಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿನ ಅಂತಿಮ ಬಿ.ಸಿ.ಎ ವಿಭಾಗ ಶೇಕಡಾ ನೂರು ಫಲಿತಾಂಶ ದಾಖಲಿಸಿದೆ. ಬಿ.ಸಿ.ಎ ವಿಭಾಗದಲ್ಲಿ ಒಟ್ಟು ೩೪ ಮಂದಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಎದುರಿಸಿದ್ದು, ಎಲ್ಲಾ ಮೂವತ್ತನಾಲ್ಕು ವಿದ್ಯಾರ್ಥಿಗಳು ತೇರ್ಗಡೆಗೊಂಡಿರುತ್ತಾರೆ.
ಅಂತಿಮ ವರ್ಷದ ಬಿ.ಎ ವಿಭಾಗದಲ್ಲಿ ೧೨೦ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೧೧ ಮಂದಿ ಉತ್ತೀರ್ಣರಾಗಿ ಒಟ್ಟು ೯೨.೫ ಶೇಕಡಾ ಫಲಿತಾಂಶ ದಾಖಲಾಗಿರುತ್ತದೆ. ಅಂತಿಮ ಬಿ.ಎಸ್ಸಿ ವಿಭಾಗದಲ್ಲಿ ೧೬೭ ಮಂದಿ ಪರೀಕ್ಷೆಗೆ ಕುಳಿತಿದ್ದು, ೧೫೭ ಮಂದಿ ಉತ್ತೀರ್ಣರಾಗಿ ೯೪.೦೧ ಶೇಕಡಾ ಫಲಿತಾಂಶ ಬಂದಿರುತ್ತದೆ.
ತೃತೀಯ ಬಿಕಾಂ ವಿಭಾಗದಲ್ಲಿ ೨೪೭ ಮಂದಿ ಪರೀಕ್ಷೆಗೆ ಹಾಜರಾಗಿದ್ದು, ೨೧೭ ಮಂದಿ ತೇರ್ಗಡೆ ಹೊಂದುವುದರ ಮೂಲಕ ೮೮.೨೧ ಫಲಿತಾಂಶ ಬಂದಿರುತ್ತದೆ. ಇನ್ನು, ಅಂತಿಮ ವರ್ಷದ ಬಿಬಿಎಂ ತರಗತಿಯಲ್ಲಿ ೧೧೪ ಮಂದಿ ಪರೀಕ್ಷೆ ಎದುರಿಸಿದ್ದು, ೮೩ ಮಂದಿ ಪಾಸಾಗುವುದರ ಮೂಲಕ ೭೨.೮೧ ಶೇಕಡಾ ಪಲಿತಾಂಶ ಬಂದಿರುತ್ತದೆ.