ವಸಹಾತೋತ್ತರ ಸಾಹಿತ್ಯದ ಮರು ಓದು ಅಗತ್ಯ: ಎನ್ ಎಸ್ ಗೋವಿಂದ
ಪುತ್ತೂರು: ಯೂರೋಪಿಯನ್ನರ ಕೆಲವು ಧೋರಣೆಗಳು ಇಂದೂ ಭಾರತದ ಸಮಾಜದಲ್ಲಿ ಬಲವಾಗಿ ಬೇರೂರಿದೆ. ಮಾತ್ರವಲ್ಲದೆ ಅದನ್ನೇ ಸತ್ಯ ಎಂದು ಬಿಂಬಿಸುವ ಮಟ್ಟಿಗೆ ತಲುಪಿದೆ. ಈ ಸಂಕ್ರಮಣ ಕಾಲದಲ್ಲಿ ವಸಹಾತೋತ್ತರ ಸಾಹಿತ್ಯದ ಮರು ಓದು ಅಗತ್ಯ ಎಂದೆನಿಸುತ್ತದೆ. ಸುಜ್ಞಾನವನ್ನು ಎಲ್ಲಾ ಕಡೆಯಿಂದಲೂ ಪಡೆಯಬಹುದು ಆದರೆ ಅಜ್ಞಾನವನ್ನು ಅಲ್ಲ ಎಂದು ಕೆ.ಎಸ್.ಎಸ್ ಕಾಲೇಜು ಸುಬ್ರಮಣ್ಯ ದ ಇಂಗ್ಲೀಷ್ ವಿಭಾಗ ಮುಖ್ಯಸ್ಥ ಪ್ರೊ; ಎನ್.ಎಸ್ ಗೋವಿಂದ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗ ಹಾಗೂ ಲಿಟರರಿ ಕ್ಲಬ್ ಆಯೋಜಿಸಿದ ವಸಹಾತೋತ್ತರ ಇಂಗ್ಲೀಷ್ ಸಾಹಿತ್ಯದ ಮರು ಓದು ವಿಷಯದ ಕುರಿತು ಅತಿಥಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಸಹಾತೋತ್ತರ ಭಾರತದಲ್ಲಿ ನಾವು ಹಲವು ಬದಲಾವಣೆಯನ್ನು ಗಮನಿಸಿದ್ದೇವೆ. ನಂತರದ ಸಾಹಿತ್ಯದಲ್ಲಿ ವಿಚಾರ ವಿನಿಮಯಕ್ಕೆ ಪೂರಕವಾದಂತಹ ವಾತಾವರಣ ಬೆಳೆಯಿತು. ಇದರಿಂದ ಭಾರತದಲ್ಲಿನ ನವ ಸಾಹಿತಿಗಳಿಗೆ ಉನ್ನತ ತಳಹದಿಯಾಯಿತು ಎಂದರು.
ವೇದಿಕೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್ ಉಪಸ್ಥಿತರಿದ್ದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ವಸುಂಧರ ಲಕ್ಷಿ ಸ್ವಾಗತಿಸಿದರು. ಅಂತಿಮ ವರ್ಷದ ವಿದ್ಯಾರ್ಥಿನಿ ಅನ್ನಪೂರ್ಣ ನಿರೂಪಿಸಿದರು. ಕಾವೇರಿ ದೇವಯ್ಯ ವಂದಿಸಿದರು.