ವಿವೇಕಾನಂದದಲ್ಲಿ ಉಪನ್ಯಾಸ ಕಾರ್ಯಕ್ರಮ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಿಂದ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಂಪೆನಿ ಸೆಕ್ರೆಟರಿ ಕೋರ್ಸ್ ಬಗೆಗಿನ ಮಾಹಿತಿ ಕಾರಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಯಿತು.
ಇನ್ಸ್ಟಿಟ್ಯೂಶನ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾದ ಮಂಗಳೂರಿನ ಚಾಪ್ಟರ್‌ನ ಗೌರವ ಕೌನ್ಸಿಲರ್ ಚಂದ್ರಕಲಾ ಮಾತನಾಡಿ ಕಂಪೆನೀಸ್ ಆಕ್ಟ್ ೨೦೧೩ರ ಪ್ರಕಾರ ಪ್ರತೀ ಕಂಪೆನಿಯಲ್ಲಿ ಕಂಪೆನಿ ಸೆಕ್ರೆಟರಿ ಹುದ್ದೆ ಇರಬೇಕು. ಇದರಲ್ಲಿ ಫೌಂಡೇಶನ್ ಪ್ರೋಗ್ರಾಮ್, ಪ್ರೊಫೆಶನಲ್ ಪ್ರೊಗ್ರಾಮ್, ಎಕ್ಸಿಕ್ಯೂಟೀವ್ ಪ್ರೋಗ್ರಾಮ್‌ಗಳೆಂಬ ವಿಧಗಳಿವೆ ಎಂದರಲ್ಲದೆ ಪ್ರತಿ ಪ್ರೊಗ್ರಾಮ್‌ನಲ್ಲಿ ಬರುವ ವಿಷಯಗಳು ರಿಜಿಸ್ಟ್ರೇಶನ್ ಪ್ರೊಸೆಸ್, ಎಕ್ಸಾಮಿನೇಶನ್ ಸಿಸ್ಸಟಮ್, ಇಂಟರ್ನ್‌ಶಿಪ್ ಪ್ರೋಗ್ರಾಮ್, ಜಾಬ್ ಇವುಗಳ ಬಗೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟ್ರಮಣ ಭಟ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.