ವಿವೇಕಾನಂದದಲ್ಲಿ ಸಿ.ಪಿ.ಟಿ ತರಬೇತಿ ಉದ್ಘಾಟನೆ
ಪುತ್ತೂರು: ವಿದ್ಯಾರ್ಥಿಯೊಬ್ಬ ಯಾವಾಗ ಸ್ವತಃ ಜ್ಞಾನಾಕಾಂಕ್ಷಿಯಾಗಿ, ವಿಷಯವನ್ನು ತಿಳಿಯುವ ತವಕವನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮದೊಂದಿಗೆ ಹಾಗು ಯೋಜನಾ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಾನೋ ಆಗ ಮಾತ್ರ ಪರೀಕ್ಷೆಗಳನ್ನು ಉತ್ತಮವಾಗಿ ಎದುರಿಸಲು ಸಾಧ್ಯ ಎಂದು ಮಂಗಳೂರಿನ ಕಿರಣ್ ವಸಂತ್ ಅಸೋಸಿಯೇಟ್ಸ್ನ ಚಾರ್ಟರ್ಡ್ ಅಕೌಂಟೆಂಟ್ ಕಿರಣ್ ವಸಂತ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಆಶ್ರಯದಲ್ಲಿ ನಡೆದ ಸಿ.ಪಿ.ಟಿ ತರಬೇತಿಯನ್ನು ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವಹಿಸಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರೊ| ವೆಂಕಟರಮಣ ಭಟ್ ಸ್ವಾಗತಿಸಿ, ಉಪನ್ಯಾಸಕಿ ರವಿಕಲಾ ವಂದಿಸಿದರು. ಚೈತ್ರ ಕಾರ್ಯಕ್ರಮ ನಿರ್ವಹಿಸಿದರು.