ವಿವೇಕಾನಂದದಲ್ಲಿ ಟೆಕ್ನೋ ವಿಷನ್ ಪತ್ರಿಕೆ ಬಿಡುಗಡೆ – ಮಾನವನ ಅಭಿವೃದ್ಧಿಗೆ ಸ್ಪರ್ಧೆಗಳು ಸಹಾಯಕ : ಡಾ. ಮಾಧವ್ ಭಟ್
ಪುತ್ತೂರು: ಅಭಿವೃದ್ಧಿಯನ್ನು ಸಾಧಿಸುವುದಕ್ಕೆ ಸ್ಪರ್ಧೆಗಳ ಅಗತ್ಯವಿದೆ. ಮಾತ್ರವಲ್ಲದೆ ಸ್ಪರ್ಧೆಗಳಲ್ಲಿ ಹಿನ್ನಡೆ ಅನುಭವಿಸಿದಾಗ ಮಾತ್ರ ಗೆಲುವಿನ ಪ್ರಾಮುಖ್ಯತೆ ಅರಿಯಬಹುದು. ಅದರಿಂದ ಪಡೆದ ಅನುಭವವು ಜೀವನದಲ್ಲಿ ಸಾಧನೆಗೈಯಲು ಸಹಾಯಕ. ವಿಫಲತೆಯ ಬಗ್ಗೆ ಖಿನ್ನರಾಗದೆ ಸಫಲತೆಯ ಕಡೆಗೆ ಸಾಗುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎಚ್.ಮಾಧವ ಭಟ್ ಹೇಳಿದರು.
ಅವರು ಕಾಲೇಜಿನ ಐ.ಟಿ ಕ್ಲಬ್‌ನ ವತಿಯಿಂದ ರೂಪಿಸಲಾದ ವಿಭಾಗದ ಮುಖವಾಣಿ ಟೆಕ್ನೋ ವಿಷನ್‌ನ ಬಿಡುಗಡೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸೃಜನಾತ್ಮಕತೆಯನ್ನು ಹೊರ ತರಲು ವಿಭಾಗದ ಮುಖವಾಣಿಗಳು ಸಹಾಯಕ. ವಿಭಾಗದಲ್ಲಿ ನಡೆಯುವ ಅನೇಕ ಹೊಸವಿಚಾರಗಳನ್ನು ತಿಳಿಸಲು ಮತ್ತು ಕಲಾತ್ಮಕತೆಯನ್ನು ಉತ್ತಮಗೊಳಿಸಲು ಬರವಣಿಗೆಯ ಅಗತ್ಯವಿದೆ. ಮನಸಿನಾಳದ ಭಾವನೆಯನ್ನು ಹಂಚಿಕೊಳ್ಳಲು ಇದು ಉತ್ತಮ ವೇದಿಕೆಯಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳಿಗೆ ವಿಚಾರಗಳನ್ನು ವಿಶ್ಲೇಷಿಸಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಶುಭಹಾರೈಸಿದರು. ಐ.ಟಿ ಕ್ಲಬ್‌ನ ಸಂಯೋಜಕ ಗುರುಕಿರಣ್ ಭಟ್ ಉಪಸ್ಥಿತರಿದ್ದರು. ಗಣಕ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಕಾಶ್ ಕುಮಾರ್ ಸ್ವಾಗತಿಸಿ, ವಿದ್ಯಾರ್ಥಿನಿ ದೀಕ್ಷಾ ನಿರ್ವಹಿಸಿ, ಐ.ಟಿ ಕ್ಲಬ್‌ನ ಸಂಯೋಜಕ ವಿಕ್ರಮ್.ಕೆ ವಂದಿಸಿದರು.