88 – 89 ರ ವಾಣಿಜ್ಯ ವಿದ್ಯಾರ್ಥಿಗಳಿಂದ ವಿವೇಕಾನಂದದಲ್ಲಿ ದತ್ತಿನಿಧಿ ಸ್ಥಾಪನೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ೧೯೮೮-೮೯ನೇ ಸಾಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ದತ್ತಿನಿಧಿ ಸ್ಥಾಪನೆಗಾಗಿ ಒಂದು ಲಕ್ಷದ ಒಂದು ಸಾವಿರ ರೂಪಾಯಿಗಳನ್ನು ಇತ್ತೀಚೆಗೆ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಅವರಿಗೆ ಹಸ್ತಾಂತರಿಸಿದರು. ಅರ್ಹ ಬಡವಿದ್ಯಾಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಉದ್ದೇಶದಿಂದ ಈ ದತ್ತಿನಿಧಿಯನ್ನು ಸ್ಥಾಪಿಸಲಾಯಿತು.
ಇತ್ತೀಚೆಗೆ ನಡೆದ ಕಾಲೇಜಿನ ಸುವರ್ಣ ಮಹೋತ್ಸವ ಹಿರಿಯ ವಿದ್ಯಾರ್ಥಿಗಳ ಪರಸ್ಪರ ಮಿಲನಕ್ಕೆ ಸಾಕ್ಷಿಯಾಗಿತ್ತು ಮಾತ್ರವಲ್ಲದೆ ಅವೆಷ್ಟೋ ವರ್ಷಗಳ ಹಿಂದೆ ಒಂದೇ ತರಗತಿಯಲ್ಲಿದ್ದವರು ಮತ್ತೊಮ್ಮೆ ಒಂದೇ ಸೂರಿನೊಳಗೆ ಮಿಲಿತವಾಗುವುದಕ್ಕೆ ಅವಕಾಶ ಕಲ್ಪಿಸಿತ್ತು. ಸಹಸ್ರಾರು ಹಿರಿಯ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿ ಇಲ್ಲಿನ ಚಟುವಟಿಕೆಗಳನ್ನು ಗಮನಿಸಿದ್ದರು.
೮೮-೮೯ನೇ ಸಾಲಿನ ವಿದ್ಯಾರ್ಥಿಗಳು ಈ ದತ್ತಿನಿಧಿಯ ಮೂಲಕ ಕಾಲೇಜಿನಲ್ಲಿ ಒಂದು ಶಾಶ್ವತವಾದ ನೆನಪನ್ನು ಬಿತ್ತಿ ಮಾದರಿಯಾಗಿದ್ದಾರೆ. ದತ್ತಿನಿಧಿಯ ಹಸ್ತಾಂತರ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್, ಕಛೇರಿ ಮುಖ್ಯಸ್ಥ ಜಗನ್ನಾಥ ಎ, ಹಿರಿಯ ವಿದ್ಯಾರ್ಥಿಗಳಾದ ರವಿ ಪಿ,ಸುರೇಂದ್ರ ಕಿನಿ, ಸುಬ್ರಹ್ಮಣ್ಯ ಭಟ್, ಸತೀಶ್ ಬಿ, ಅಶೋಕ್ ಆಚಾರ್ಯ ನಾರಾಯಣ ಇ, ಆಶಾ ಬಿ ಹಾಜರಿದ್ದರು.