VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ಉಚಿತ ಬಸ್ ಪಾಸ್ ವಿತರಣಾ ಸಮಾರಂಭ

ಪುತ್ತೂರು: ನಾವು ಕಷ್ಟ ಪಟ್ಟು ಗಳಿಸಿದ ಸಂಪತ್ತು ನಮ್ಮದೆನಿಸಿಕೊಳ್ಳುತ್ತದೆ.  ದುಡಿಯಲು ಸದಾ ಸಿದ್ಧರಿರಬೇಕು. ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇರಬೇಕು. ನಮ್ಮ ಒಳ್ಳೆಯ ದುಡಿತ ನಮ್ಮನ್ನು ಸಮಾಜದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಉದ್ಯಮಿ ಅಶೋಕ್ ಕುಮಾರ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ, ರೈ ಎಸ್ಟೇಟ್ಸ್ ಎಜ್ಯುಕೇಷನ್ ಹಾಗೂ ಚಾರಿಟೇಬಲ್ ಟ್ರಸ್ಟ್(ರಿ), ಜನಸೇವಾ ಕೇಂದ್ರ ಪುತ್ತೂರು ಮತ್ತು ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾದ ’ಉಚಿತ ಬಸ್ ಪಾಸ್ ವಿತರಣಾ ಸಮಾರಂಭ’ದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಿ ಸೋಮವಾರ ಮಾತನಾಡಿದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣವೂ ಆಗಬೇಕು. ಉದ್ಯೋಗ ಸಿಗುತ್ತಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾವ ಕೆಲಸವನ್ನಾದೂ ಮಾಡಬಲ್ಲೆ ಎಂದು ಮುಂದೆ ಬರುವುದಿಲ್ಲ. ನಾವು ಮಾಡುವ ಕೆಲಸಗಳೇ ಸಮಾಜದಲ್ಲಿ ನಮ್ಮನ್ನು ಗುರುತಿಸುವುದು. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಕಾಡುವ ಕನಸನ್ನು ನನಸಾಗಿಸಿಕೊಳ್ಳಬೇಕು. ಜೀವನದಲ್ಲಿ ಮುಂದುವರೆಯುತ್ತಾ ಸಾಗಬೇಕು ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಜಯರಾಮ್ ಭಟ್ ಮಾತನಾಡಿ, ಪಡೆದ ಸಹಾಯವನ್ನು ಎಂದಿಗೂ ಮರೆಯ ಬಾರದು. ಯಶಸ್ಸು ಸಿಕ್ಕಾಗ ನಡೆದು ಬಂದ ದಾರಿಯನ್ನು ಕಡೆಗಣಿಸಬಾರದು. ಕಷ್ಟದಲ್ಲಿರುವವರಿಗೆ, ಸಹಾಯ ಬಯಸುವವರಿಗೆ ಸಹಾಯ ಮಾಡುವ ಮೂಲಕ ನಾವು ಪಡೆದ ಸಹಾಯದ ಋಣವನ್ನು ತೀರಿಸುವ ಪ್ರಯತ್ನ ಮಾಡಬೇಕು. ಓದಿಗೆ ಸಹಾಯ ಮಾಡಿದ ಮಹಾತ್ಮರ ಋಣಕ್ಕೆ ಪ್ರತಿಯಾಗಿ ನಾವು ಕೆಟ್ಟ ದಾರಿ ಹಿಡಿಯದೆ ಸನ್ನಡತೆ ಬೆಳೆಸಿಕೊಂಡು, ಒಳ್ಳೆಯ ಅಂಕಗಳನ್ನು ಪಡೆಯುವ ಮೂಲಕ ಕೃಜ್ಞತೆ ಸಲ್ಲಿಸಬೆಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಕೃಷ್ಣಕಾರಂತ್, ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ, ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಪ್ರಥಮಾ ಉಪಾಧ್ಯಾಯ ಪ್ರಾಥಿಸಿದರು. ವಿದಾರ್ಥಿ ಸಂಘದ ಕಾರ್ಯದರ್ಶಿ ಪಂಕಜ್ ಸ್ವಾಗತಿಸಿ, ಅಧ್ಯಕ್ಷ ಭಗತ್ ವಂದಿಸಿದರು.