ಗಂಗೆಯು ಆಧ್ಯಾತ್ಮ ಪ್ರತೀಕ : ಡಾ. ಶ್ರೀಶ ಕುಮಾರ್ ಎಂ.ಕೆ.
ಪುತ್ತೂರು: ಗಂಗೆಯ ಬಗೆಗೆ ವೇದಗಳಲ್ಲಿ ಬಹು ಚೆಂದವಾಗಿ ವಿನ್ಯಾಸ ಇದೆ. ಗಂಗೆಯಷ್ಟು ಶ್ರೇಷ್ಟ, ಪವಿತ್ರವಾದ ನದಿ ಈ ಜಗತ್ತಿನಲ್ಲಿ ಬೇರೊಂದಿಲ್ಲ. ಭಾರತದ ಪ್ರಸಿದ್ಧ ನದಿಯಾದ ಗಂಗೆಯು ಆಧ್ಯಾತ್ಮ ಪ್ರತೀಕವಾಗಿದೆ. ಆದರೆ ಇಂದು ಗಂಗೆ ಮಲೀನವಾಗಿದೆ. ಎಲ್ಲಿಯವರೆಗೆ ಮನುಷ್ಯರು ಶುದ್ಧವಾಗುವುದಿಲ್ಲವೂ, ಅಲ್ಲಿಯವರೆಗೂ ಗಂಗೆ ಶುದ್ಧವಾಗಲು ಸಾಧ್ಯವಿಲ್ಲ ಎಂದು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ.ಶ್ರೀಶ ಕುಮಾರ ಎಂ.ಕೆ ಹೇಳಿದರು.
ಅವರು ಇಲ್ಲಿನ ಕಾಲೇಜಿನ ಹಿಂದಿ ಸಂಘದ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗಂಗಾ ದರ್ಶನ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗಂಗೆ ಆಧ್ಯಾತ್ಮ ಸಾಧಕರಿಗೆ ದಾರಿ ತೋರಿಸುತ್ತದೆ. ಗಂಗೆಯಲ್ಲಿರುವ ಸಾಮರ್ಥ್ಯ ಬೇರೆ ಯಾವುದರಲ್ಲೂ ಇಲ್ಲ. ಯಾರೂ ಕೂಡ ಸಂಕಲ್ಪ ಇಲ್ಲದೇ, ಗಂಗೆಗೆ ಇಳಿಯುವ ಪದ್ಧತಿ ಇಲ್ಲ. ಏಕೆಂದರೆ ಅದು ಅತ್ಯಂತ ಪವಿತ್ರ ನದಿಯಾಗಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಪಕೃತಿ ಪೂಜೆ ಬಹಳ ಮಹತ್ವವಾದದ್ದು, ಹಾಗಾಗಿ ಗಂಗಾ ನದಿಗೆ ಪೂಜೆಯನ್ನು ಮಾಡುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸಿ. ದುರ್ಗಾರತ್ನ ವಹಿಸಿದ್ದರು. ವಿಭಾಗದ ಉಪನ್ಯಾಸಕಿ ಡಾ. ಆಶಾ ಸಾವಿತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿರಾದ ಅಮೃತಾ ಪೈ.ಬಿ ಸ್ವಾಗತಿಸಿ, ನಿವೇದಿತಾ ವೈ.ಆರ್ ಕಾರ್ಯಕ್ರಮ ನಿರ್ವಹಿಸಿದರು. ಶೃತಿ ಸುನಿಲ್ ವಂದಿಸಿದರು.