ಔದ್ಯೋಗಿಕ ಕ್ಷೇತ್ರದಲ್ಲಿ ಬಹು ಭಾಷಾ ಜ್ಞಾನ ಅಗತ್ಯ: ಗಣೇಶ್ ಪ್ರಸಾದ್
ಪುತ್ತೂರು: ಹೊಸ ಭಾಷಾ ಕಲಿಕೆಯ ಅವಕಾಶವನ್ನು ಉಪಯೋಗಿಸಿಕೊಳ್ಳುವುದು ಅಗತ್ಯ. ಭಾಷೆ ನಮ್ಮ ಕೈ ಹಿಡಿಯುತ್ತದೆ. ಭಾಷೆ ಕಲಿತು ಅದನ್ನು ಬೇಕಾದಲ್ಲಿ ಬೇಕಾದಂತೆ ಉಪಯೋಗಿಸುವುದನ್ನು ಕಲಿಯಬೇಕು. ಔದ್ಯೋಗಿಕ ಕ್ಷೇತ್ರಕ್ಕೆ ಹೋದಾಗ ಹೊಸ ಭಾಷೆ ನಮ್ಮ ಶೈಕ್ಷಣಿಕ ಸಾಧನೆಯ ಮೌಲ್ಯವರ್ಧಕ ಅಂಶವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಗಣೇಶ್ ಪ್ರಸಾದ್ ಎ ಹೇಳಿದರು.
ಅವರು ಕಾಲೇಜಿನ ಇಂಗ್ಲೀಷ್ ವಿಭಾಗ ಆಯೋಜಿಸಿದ ಜರ್ಮನ್ ಭಾಷಾ ಕಲಿಕೆ ತರಗತಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ಮಾತನಾಡಿ ಭಾಷೆಯು ನಮ್ಮ ಜ್ಞಾನವನ್ನು ವೃದ್ಧಿಸುತ್ತದೆ. ವಿವಿಧ ಬಗೆಗಿನ ಭಾಷಾ ಜ್ಞಾನ ಬೇರೆ ಬೇರೆ ಭಾಷೆಯ ಕೃತಿಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ಓದಲು ಸಾಧ್ಯವಾಗುತ್ತದೆ. ಇದರಿಂದ ಕೃತಿಗಳನ್ನು ಭಾಷಾಂತರಿಸಲು ಅನುವಾಗುತ್ತದೆ. ಹೊರ ಪ್ರದೇಶಗಳಿಗೆ ಹೋದಾಗ ಅನಿವಾರ್‍ಯವಾಗಿ ಹೊಸ ಭಾಷೆಗಳನ್ನು ಕಲಿಯ ಬೇಕಾಗುತ್ತದೆ. ಪುಸ್ತಕದ ಹೊರತಾದ ವಿಚಾರಗಳು ಕೆಲವೊಮ್ಮೆ ಬದುಕಿನ ದಾರಿಯಾಗುತ್ತದೆ ಎಂದರು.
ವಿವಿಧ ಭಾಷೆಗಳನ್ನು ಕಲಿಯುವುದು ಒಂದು ರೀತಿಯ ವಿಶೇಷ ವಿದ್ಯೆಯಾಗಿದ್ದು, ಕೃತಿಯನ್ನು ಅನುವಾದಿಸುವಾಗ ಮೂಲಸತ್ವಕ್ಕೆ ಧಕ್ಕೆಯಾಗಬಾರದು. ಅದಕ್ಕಾಗಿ ತರಬೇತಿಗಳನ್ನು ಸರಿಯಾದ ರೀತಿಯಾಗಿ ಬಳಸುವುದು ಅತೀ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಕಾರ್‍ಯಕ್ರಮ ಸಂಯೋಜಕಿ ಮೋತಿ ಬಾ ಸ್ವಾಗತಿಸಿ ವಿದ್ಯಾರ್ಥಿ ಶ್ರೀಕೃತಿ ಶರ್ಮ ವಂದಿಸಿದರು. ವಿದ್ಯಾಥಿನಿ ಪ್ರಥಮ ಕಾರ್‍ಯಕ್ರಮ ನಿರೂಪಿಸಿದರು.