ಹಾಸ್ಯ ಅಪಹಾಸ್ಯವಾಗಬಾರದು: ವಾಸುದೇವ ಎನ್
ಪುತ್ತೂರು: ಯಾವ ಅದ್ಯಾಪಕರು ಮಕ್ಕಳಂತೆ ಕೀಟಲೆ ಮಾಡಿ ನಂತರ ಅಧ್ಯಾಪಕರಾಗಿ ಬಂದಿರುತ್ತಾರೋ ಅವರು ಮಕ್ಕಳ ಮನಸ್ಸನ್ನು ಬಹುಬೇಗ ಅರ್ಥಮಾಡಿಕೊಳ್ಳಬಲ್ಲರು. ಅಂತೆಯೇ ವಿದ್ಯಾರ್ಥಿಗಳು ತರಗತಿಯಲ್ಲಿ ಅದ್ಯಾಪಕರನ್ನು ಅನುಕರಣೆ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಅದೊಂದು ಮೋಜಿನ ಸಂಗತಿ. ನಾವು ಹಾಸ್ಯ ಮಾಡಬೇಕು ಆದರೆ ಅಪಹಾಸ್ಯ ಮಾಡಬಾರದು. ವಿದ್ಯಾರ್ಥಿ ಹಾಗೂ ಅದ್ಯಾಪಕರ ಭಾಂದವ್ಯ ಅರ್ಥಮಾಡಿಕೊಂಡು ಅದನ್ನು ಗಟ್ಟಿಗೊಳಿಸಬೇಕು ಎಂದು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ವಾಸುದೇವ ಎನ್ ತಿಳಿಸಿದರು.
ಅವರು ಇತ್ತೀಚೆಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸಿಕೊಡುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಕ್ಲಾಸ್ ರೂಮ್ ಕಾರು ಬಾರು ಎಂಬ ವಿಚಾರದ ಬಗೆಗೆ ಮಾತಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಶ್ರೇಯಸ್, ಸುಮಯ್ಯ ವಿ ಕೆ, ಅಜ಼ಾದ್, ಉಮಾವತಿ, ಅರುಣ್, ಅರ್ಪಣ, ಆಶಿಕ್ ಗೌಡ, ಮೇಘ ಲಕ್ಷ್ಮಿ ಮರುವಾಳ, ಪೂಜಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯದರ್ಶಿ ಪ್ರೆಸಿಲ್ಲಾ ಒಲಿವಿಯಾ ಡಾಯಸ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ. ಆರ್ ವಂದಿಸಿದರು. ವಿದ್ಯಾರ್ಥಿನಿ ರಮ್ಯಾ ಎಂ ಕಾರ್ಯಕ್ರಮ ನಿರೂಪಿಸಿದರು.