VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ – ಏಳೂವರೆ ಸಾವಿರ ಮಂದಿಯಿಂದ ದ್ವಜವಂದನೆ

ಪುತ್ತೂರು: ಸುಮಾರು ಏಳು ಸಾವಿರ ಮಂದಿ ವಿದ್ಯಾರ್ಥಿಗಳು, ಐದು ನೂರಕ್ಕೂ ಮಿಕ್ಕ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ, ಆಡಳಿತ ಮಂಡಳಿಯ ಸದಸ್ಯರು, ಪದಾಧಿಕಾರಿಗಳು, ಇಷ್ಟಲ್ಲದೆ ನೆರೆದ ಕುತೂಹಲಿಗರ ಸಂಖ್ಯೆ. ಇವೆಲ್ಲದರ ಮಧ್ಯೆ ಮಾಜಿ ಲೆಫ್ಟಿನೆಂಟ್ ಕರ್ನಲ್ ಎಸ್.ಟಿ.ರಮಾಕಾಂತನ್ ಅವರಿಂದ ಧ್ವಜಾರೋಹಣ. ಇಡೀ ಅಂಗಣದಲ್ಲಿ ಮೊಳಗಿದ ಜಯಘೋಷ.

VVS Independence 3 VVS Photo - Independence

          ಹೀಗೆ ಅದ್ಧೂರಿಯಾಗಿ ಸ್ವಾತಂತ್ರ್ಯ ದಿಣಾಚರಣೆ ಜರಗಿದ್ದು ವಿವೇಕಾನಂದ ಕ್ಯಾಂಪಸ್‌ನಲ್ಲಿರುವ ಕ್ರೀಡಾಂಗಣದಲ್ಲಿ. ವಿವೇಕಾನಂದ ವಿದ್ಯಾವರ್ಧಕ ಸಂಘ ಈ ಬಾರಿ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡದ್ದು ಈ ರೀತಿ. ಕ್ಯಾಂಪಸ್‌ನಲ್ಲಿರುವ ಪದವಿ, ಪದವಿಪೂರ್ವ, ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಎಲ್ಲಾ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಕಳೆ ತಂದರು.

          ಈ ಸಂದರ್ಭದಲ್ಲಿ ಸಂದೇಶ ಭಾಷಣ ಮಾಡಿದ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ೧೯೪೭ರಲ್ಲಿ ದೇಶಕ್ಕೆ ದೊರಕಿದ್ದು ರಾಜಕೀಯ ಸ್ವಾತಂತ್ರ್ಯ ಮಾತ್ರ. ಉಳಿದಂತೆ ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯಗಳೇ ಮೊದಲಾದ ಅನೇಕ ಸ್ವಾತಂತ್ರ್ಯಗಳನ್ನು ನಾವು ಗಳಿಸುವತ್ತ ಹೆಜ್ಜೆಯಿಡುತ್ತಿದ್ದೇವೆ. ಹಾಗಾಗಿಯೇ ಭವ್ಯ ಇತಿಹಾಸದ ಕಾಲ ಆರಂಭಗೊಂಡಿದೆ. ನೂತನ ಆರ್ಥಿಕ ಚಿಂತನೆಗಳು ಮೂಡತೊಡಗಿವೆ. ಉದ್ಯೋಗಾವಕಾಶ ತೆರೆದುಕೊಳ್ಳುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಮೇಕ್ ಇನ್ ಇಂಡಿಯಾದೆಡೆಗೆ ನಾವು ಮನಮಾಡಬೇಕು. ನಾವೇನೇ ಸಾಧಿಸುವುದಿದ್ದರೂ ಭಾರತದಲ್ಲೇ ಸಾಧಿಸಿ ನಮ್ಮ ದೇಶಪ್ರೇಮವನ್ನು ಮೆರೆಯಬೇಕು. ಒಡೆದ ಮನಸ್ಸುಗಳನ್ನು ಕಟ್ಟುವ ಕಾಯಕದಲ್ಲಿ ತೊಡಗಬೇಕು ಎಂದು ನುಡಿದರು.

ದೇಶ ಬದಲಾವಣೆಯ ಶಕೆಗೆ ತನ್ನನ್ನು ತಾನು ತೆರೆದುಕೊಂಡಿದೆ. ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತಿದೆ. ಹಾಗಾಗಿ ಯಾವುದೇ ನಿರಾಸೆ ಅಗತ್ಯವಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣತೊಡಗಿದೆ. ಇದು ನಾವೆಲ್ಲ ಹೆಮ್ಮೆ ಪಡುವ ವಿಚಾರ ಎಂದರು. ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಧ್ವಜವಂದನೆ, ರೋವರ್ಸ್ ರೇಂಜರ್‍ಸ್ ತಂಡದವರಿಂದ ಬ್ಯಾಂಡ್ ಪಾರ್ಟಿ ನಡೆಯಿತು.

          ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ, ನಿರ್ದೇಶಕ ರಾಧಾಕೃಷ್ಣ ಭಕ್ತ, ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ, ಸದಸ್ಯ ಸೇಡಿಯಾಪು ಜನಾರ್ಧನ ಭಟ್, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್ ದಾಸ್ ಎ, ಪಾಲಿಡೆಕ್ನಿಕ್ ಕಾಲೇಜಿನ ಉಪನ್ಯಾಸಕ ಹರಿಕೃಷ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಎಂ.ಕೆ ಕಾರ್ಯಕ್ರಮ ನಿರ್ವಹಿಸಿದರು.