ಐಶ್ವರ್ಯಕ್ಕಿಂತ ಗೌರವ ಮುಖ್ಯ: ಗೌತಮ್ ಪೈ
ಪುತ್ತೂರು: ಬಾಳ್ವೆ ನಡೆಸುವಾಗ ಮರ್ಯಾದೆಯಿಂದ ನಡೆಸಬೇಕು. ನಮ್ಮ ಗೌರವಕ್ಕೆ ಯಾವತ್ತೂ ಕುಂದು ಬರಬಾರದು. ಎಷ್ಟೇ ಸಂಪತ್ತು ಇದ್ದರೂ ಸಹ ನಮ್ಮ ಮರ್ಯಾದೆಯನ್ನು ಯಾವತ್ತಿಗೂ ಕಳೆದುಕೊಳ್ಳಬಾರದು. ಐಶ್ವರ್ಯಕ್ಕಿಂತ ಗೌರವ ಅತೀ ಮುಖ್ಯ ಎಂದು ವಿವೇಕಾನಂದ ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ಗೌತಮ್ ಪೈ ಹೇಳಿದರು.
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಅಯ್ಯೋ ಮರ್ಯಾದೆ ಸ್ವಾಮಿ ಅನ್ನುವ ವಿಚಾರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದಾರ್ಥಿಗಳಾದ ಅಪರ್ಣ, ಅಕ್ಷತಾ, ಆಜ಼ಾದ್, ರಮ್ಯ, ಸಚಿನ್, ದಿನೇಶ್, ಪ್ರಿಯಾ ಕೆ.ಎಸ್, ಸುಮಯ್ಯಾ, ದೀಕ್ಷಿತ್, ಶ್ರೇಯಸ್ ಹಾಗೂ ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ಬಿ. ಅತುಲ್ ಶೆಣೈ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಪ್ರೆಸಿಲ್ಲಾ ಒಲಿವಿಯಾ ಡಾಯಸ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ಭುವನೇಶ್ವರಿ ಕಾರ‍್ಯಕ್ರಮ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು.