ಚಿತ್ರಗಳನ್ನು ಆಕರ್ಷಕಗೊಳಿಸಲು ಫೊಟೊಶಾಪ್ ತಂತ್ರ ಜ್ಞಾನ ಅಗತ್ಯ: ಪುನೀತ್
ಪುತ್ತೂರು: ಫೊಟೋ ಎಲ್ಲರೂ ಕ್ಲಿಕ್ಕಿಸುತ್ತಾರೆ. ಆದರೆ ಆಕರ್ಷಕ ಛಾಯಾಚಿತ್ರ ತೆಗೆಯಲು ನುರಿತವರಿಗೆ ಮಾತ್ರ ಸಾಧ್ಯ. ಫೊಟೋಶಾಪ್ ಬಳಕೆಯ ಬಗೆಗೆ ತಿಳುವಳಿಕೆ ಇದ್ದಾಗ ಆ ಚಿತ್ರವು ಮನೆಸೂರೆಗೊಳ್ಳುವಂತೆ ಮಾಡಲು ಸಾಧ್ಯ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ವಿಭಾಗದ ಸಹಾಯಕ ಪುನೀತ್ ಹೇಳಿದರು.
ಅವರು ಕಾಲೇಜಿನ ಐಟಿ ಕ್ಲಬ್‌ವತಿಯಿಂದ ಆಯೋಜಿಸಿದ ಫೋಟೋಶಾಪ್ ಮಾಹಿತಿ ಕಾರ್‍ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು.
ಫೋಟೋಶಾಪ್ ನಿಂದ ಚಿತ್ರಗಳನ್ನು ಸಾಕಷ್ಟು ಸುಂದರಗೊಳಿಸುವುದಕ್ಕೆ ಸಾಧ್ಯವಿದೆ ಎನ್ನುವುದು ಹೌದಾದರೂ ಯಾವುದೇ ಚಿತ್ರ ಸ್ಪರ್ಧೆಗಳಿಗೆ ಅಥವ ನಮ್ಮ ಮೂಲ ಚಿತ್ರದ ಆಧಾರದಿಂದ ಸಂಗತಿಯೊಂದು ನಿರ್ಣಯವಾಗುವ ಸಂದರ್ಭಗಳಲ್ಲಿ ಫೋಟೋಶಾಪ್ ಬಳಸುವುದು ತಪ್ಪು. ಆದರೆ ಜಾಹೀರಾತು, ಪ್ಲೆಕ್ಸ್ ಅಂತೆಯೇ ಯಾರಿಗೂ ಹಾನಿಯಾಗದೆ ಕೇವಲ ಮನರಂಜನೆ, ಆಕರ್ಷಣೆಯ ಉದ್ದೇಶದಿಂದ ಫೋಟೋಶಾಪ್ ಬಳಸಿದರೆ ತಪ್ಪಿಲ್ಲ ಎಂದರು.
ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ ಕ್ಲಬ್ ಅಧ್ಯಕ್ಷೆ ಶ್ರೇಯಾ, ಐಟಿ ಕ್ಲಬ್ ಉಪಾಧ್ಯಕ್ಷ ನಿಶಾಂತ್ ಐಟಿ ಕ್ಲಬ್ ಸಂಚಾಲಕ, ಉಪನ್ಯಾಸಕ ಸೂರ್‍ಯನಾರಾಯಣ ಉಪಸ್ಥಿತರಿದ್ದರು. ವಿದ್ಯಾರ್ಥಿ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು.