ವಿವೇಕಾನಂದದಲ್ಲಿ ಐಟಿ ಕ್ಲಬ್ನಿಂದ ಉಪನ್ಯಾಸ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಟಿ ಕ್ಲಬ್‌ನ ಆಶ್ರಯದಲ್ಲಿ ಕಂಪ್ಯೂಟರ್‍ಸ್ ಇನ್ ಸ್ಪೇಸ್ ಟೆಕ್ನಾಲಜಿ ಅನ್ನುವ ವಿಚಾರವಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಸಾಂಖ್ಯ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಪ್ರೊ. ಶಂಕರ್ ಭಟ್ ಪಟಿಕಲ್ ಮಾತನಾಡಿ ಬಾಹ್ಯಾಕಾಶದಲ್ಲಿ ಕಂಪ್ಯೂಟರ್‌ಗಳು ಕಾರ್ಯ ನಿರ್ವಹಿಸುವ ವಿಧಾನಗಳ ಬಗೆಗೆ ವಿವರಿಸಿದರು.
ಕಂಪ್ಯೂಟರ್‌ಗಳು ಬಾಹ್ಯಾಕಾಶದ ಬೆಳವಣಿಗೆಗಳನ್ನು ಅರಿಯುವಲ್ಲಿ ಸಹಕಾರಿಯೆನಿಸಿವೆ. ಉಡ್ಡಯಿಸಲ್ಪಟ್ಟ ರಾಕೆಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕಂಪ್ಯೂಟರ್‌ಗಳು ಕಾಲಕಾಲಕ್ಕೆ ತಿಳಿಸುತ್ತವೆ. ಮಾನವ ರಹಿತವಾಗಿ ಕಾರ್ಯನಿರ್ವಹಿಸಬಲ್ಲ ಈ ಕಂಪ್ಯೂಟರ್‌ಗಳು ರಾಕೆಟ್‌ನ ವರ್ತನೆಯ ಬಗೆಗೂ ತಿಳಿಸುತ್ತವೆ. ಅಲ್ಲದೆ ಈ ಕಂಪ್ಯೂಟರ್‌ಗಳನ್ನು ನಾವು ಭೂಮಿಯಿಂದಲೇ ನಿಯಂತ್ರಿಸಲು ಸಾಧ್ಯ ಎಂದು ನುಡಿದರು.
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕಂಪ್ಯೂಟರ್‌ಗಳನ್ನು ಬಳಸುವ ಬಗೆಗೆ ಮಾಹಿತಿ ನೀಡಿ ಯಾವ ತೆರನಾದ ಯೋಜನೆ ಹಾಕಿಕೊಳ್ಳಬೇಕು, ಆ ಕಂಪ್ಯೂಟರ್‌ನಲ್ಲಿ ಯಾವ ಯಾವ ತಾಂತ್ರಿಕ ಸಂಗತಿಗಳು ಅಡಕವಾಗಿರಬೇಕು ಎಂಬುದಲ್ಲದೆ ಅವುಗಳು ಹೇಗೆ ಸನ್ನಿವೇಶಗಳನ್ನು ಎದುರಿಸುವಂತೆ ಸಿದ್ಧಗೊಳ್ಳಬೇಕು ಎಂಬ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕಿ ರಮ್ಯಾ ಕಾಶ್ಯಪ್ ಸ್ವಾಗತಿಸಿದರು. ಉಪನ್ಯಾಸಕಿ ಶ್ವೇತ ಲಕ್ಷ್ಮಿ ವಂದಿಸಿದರು.