ವಿವೇಕಾನಂದದಲ್ಲಿ ಐಟಿ ಕ್ಲಬ್ನಿಂದ ಅತಿಥಿ ಉಪನ್ಯಾಸ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಐಟಿ ಕ್ಲಬ್‌ನ ಆಶ್ರಯದಲ್ಲಿ ನೆಟ್‌ವರ್ಕ್ ಅಂಡ್ ನೆಟ್‌ವರ್ಕ್ ಸೆಕ್ಯೂರಿಟೀಸ್ ಅನ್ನುವ ವಿಚಾರದ ಬಗೆಗೆ ಇತ್ತೀಚೆಗೆ ಅತಿಥಿ ಉಪನ್ಯಾಸ ನಡೆಯಿತು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ನಿಶ್ಚಯ್ ಕುಮಾರ್ ಹೆಗ್ಡೆ ಉಪನ್ಯಾಸ ನೀಡಿ ಜಾಲವ್ಯವಸ್ಥೆಯಲ್ಲಿ ಮಾಹಿತಿಯನ್ನು ಕಳುಹಿಸುವಾಗ ಎಚ್ಚರಿಕೆ ವಹಿಸಬೇಕು. ಯಾವುದೇ ಮಾಹಿತಿಗೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ದಾಳಿಗಳಾಗುವ ಸಾಧ್ಯತೆಗಳಿವೆ. ಈ ಕುರಿತಾದ ಜ್ಞಾನ ಇರಬೇಕು ಎಂದರು.
ಜಾಲವ್ಯವಸ್ಥೆಯ ಬೆಳವಣಿಗೆಯಿಂದಾಗಿ ಇಂದು ನಾವು ಯಾವುದೇ ಮಾಹಿತಿಯನ್ನು, ಚಿತ್ರಗಳನ್ನು, ವೀಡಿಯೋಗಳನ್ನು ಸುಲಭಸಾಧ್ಯವಾಗಿ ಮತ್ತೊಂದು ಕಡೆಗೆ ಕಳುಹಿಸಲು ಹಾಗೂ ಯಾವುದೇ ಪ್ರದೇಶದಲ್ಲಿ ಸ್ವೀಕರಿಸಲು ಸಾಧ್ಯವಾಗಿದೆ. ಆದರೆ ನಮ್ಮ ಸಂಗತಿಗಳನ್ನು ಕಳುಹಿಸುವಾಗ ಗೋಚರ ಹಾಗೂ ಅಗೋಚರವಾಗಿ ಆಗಬಹುದಾದ ದಾಳಿಗಳ ಬಗೆಗೆ ಜಾಗೃತರಾಗಿರಬೇಕು ಎಂದು ನುಡಿದರು.
ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು. ಐಟಿ ಕ್ಲಬ್‌ನ ಸಂಯೋಜಕಿ, ಉಪನ್ಯಾಸಕಿ ಶ್ವೇತಲಕ್ಷ್ಮಿ ಸ್ವಾಗತಿಸಿ, ವಂದಿಸಿದರು.