ಜ್ಞಾನದಿಂದ ಮಾತ್ರ ಜಗತ್ತಿಗೆ ನಮ್ಮನ್ನು ಪರಿಚಯಿಸಿಕೊಳ್ಳಬಹುದು : ರುಬನ್ ಎಸ್
ಪುತ್ತೂರು: ತಂತ್ರಜ್ಞಾನ ಇಂದು ಅಗಸದ ಎತ್ತರಕ್ಕೆ ಬೆಳೆದು ನಿಂತಿರುವ ಕ್ಷೇತ್ರವಾಗಿದೆ. ಅತ್ಯಂತ ತ್ವರಿತ ಗತಿಯಲ್ಲಿ ಅಭಿವೃದ್ದಿ, ಆವಿಷ್ಕಾರವನ್ನು ಐ.ಟಿ ಸೇರಿದಂತೆ ಕಂಪ್ಯೂಟರ್ ಕ್ಷೇತ್ರ ಕಾಣುವಂತಾಗಿದೆ. ನಾವಿಂದು ತಂತ್ರಜ್ಞಾನಗಳೊಂದಿಗೆ ಬೆಳೆಯುತ್ತಿದ್ದೇವೆ. ಎಂದು ಮಂಗಳೂರಿನ ಎಐಎಂಐಟಿ ಇದರ ಸಹಾಯಕ ಪ್ರಾಧ್ಯಾಪಕ ರುಬನ್ ಎಸ್ ನುಡಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಐ.ಟಿ ಕ್ಲಬ್ ನ ೨೦೧೬-೧೭ ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಗಳು ತಮ್ಮ ನಿಯಂತ್ರಣ ಸಾಧಿಸುತ್ತಿವೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕೊರತೆಯನ್ನು ಹೋಗಲಾಡಿಸುವತ್ತ ಐ.ಟಿ ಕ್ಷೇತ್ರ ಕಾಲಿಟ್ಟಿದೆ. ತಮ್ಮ ಕೌಶಲ್ಯವನ್ನು ಒರೆ ಹಚ್ಚಲು ದೊರೆತ ಅವಕಾಶವನ್ನು ಸಧ್ವಿನಿಯೋಗಪಡಿಸಿಕೊಳ್ಳೋಣ. ವಿವಿಧ ಖಾರ್ಯಕ್ರಮಗಳ ಆಯೋಜನೆಯಿಂದ ನಮ್ಮನ್ನು ನಾವು ಜಗತ್ತಿಗೆ ಪರಿಚಯಿಸಿಕೊಳ್ಳಬಹುದು. ಜ್ಞಾನವೊಂದೆ ಇಂದು ಜಗತ್ತನ್ನು ಗೆಲ್ಲವ ಆಯುಧವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಕಂಪ್ಯೂಟರ್ ಇಂದು ಜಗತ್ತಿನೆಲ್ಲಡೆ ಪಸರಿಸಿಕೊಂಡಿದೆ. ಆಧುನಿಕ ಸಾಪ್ಟ್‌ವೇರ್‌ಗಳಿಂದ ಇಂದು ನಮ್ಮ ಕೆಲಸ ಕಾರ್ಯಗಳನ್ನು ಅತ್ಯಂತ ಸುಲಲಿತವಾಗಿ ನಡೆಸಿಕೊಳ್ಳಬಹುದು. ಇವುಗಳ ಮುಖಾಂತರ ಜ್ಞಾನಾಭಿವೃದ್ದಿ ಪೂರಕವಾದ ವಾತವರಣ ನಿರ್ಮಾಣವಾಗುತ್ತಿದೆ. ತಂತ್ರಜ್ಞಾನಗಳನ್ನು ಸಕಾರಾತ್ಮಕ ದೃಷ್ಟಿಕೋನದಿಂದ ನೋಡುವುದನ್ನುಮೊದಲು ಕಲಿಯಬೇಕು. ಬದಲಾಗಿ ಅವುಗಳ ಕೆಲವು ದುರ್ಬಳಕೆಗಳನ್ನು ಮೂಲವಾಗಿಟ್ಟುಕೊಂಡು ದೂಷಿಸುವುದು ತರವಲ್ಲ. ಸಮಾಜ ಸ್ನೇಹಿಯಾಗಿ ಬಳಸುವುದರ ಮೂಲಕ ಇನ್ನೊಬ್ಬರಿಗೆ ಬೆಳಕಾಗಬೇಕು ಎಂದರು.
ವೇದಿಕೆಯಲ್ಲಿ ಐ.ಟಿ ಕ್ಲಬ್ ನ ಸಂಯೋಜಕ ಗುರುಕಿರಣ್ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಾಂತ್ ಪಿ. ಸ್ವಾಗತಿಸಿದರು. ಅಂತಿಮ ವರ್ಷದ ಬಿ.ಸಿ.ಎ ವಿದ್ಯಾರ್ಥಿನಿ ಪೌರ್ಣಮಿ ವಂದಿಸಿದರು. ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.