ಜೋತಿಷ್ಯಶಾಸ್ತ್ರದ ಬಗ್ಗೆ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿದೆ: ಸುಹಾಸ್ ಕೃಷ್ಣ
ಪುತ್ತೂರು: ಭವಿಷ್ಯ ಎಂದರೆ ಮುಂದೆ ಸಂಭವಿಸುವ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದು. ಜೋತಿಷ್ಯಶಾಸ್ತ್ರ ಎಂಬುವುದು ಬಹಳ ಹಳೆಯ ಶಾಸ್ತ್ರವಾಗಿದೆ. ಅನೇಕ ಪ್ರಾಚೀನ ಗ್ರಂಥಗಳು ಇದರ ಬಗ್ಗೆ ಮಾಹಿತಿ ನೀಡುತ್ತವೆ. ಮಹಾನ್ ಋಷಿಗಳು ತಮ್ಮ ಗ್ರಂಥಗಳಲ್ಲಿ ಜೋತಿಷ್ಯಶಾಸ್ತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂದು ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ಉಪನ್ಯಾಸಕ ಸುಹಾಸ್ ಕೃಷ್ಣ ತಿಳಿಸಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾದ ವತಿಯಿಂದ ನಡೆದ ಮಣಿಕರ್ಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ’ದಿನ ಭವಿಷ್ಯ’ ಎಂಬ ವಿಷಯದ ಕುರಿತು ಮಾತನಾಡಿದರು.
ಒಟ್ಟು ಇಪ್ಪತ್ತೇಳು ನಕ್ಷತ್ರಗಳು ಜೋತಿಷ್ಯಶಾಸ್ತ್ರದಲ್ಲಿ ಬಳಕೆಯಾಗುತ್ತವೆ. ಗ್ರಹಗಳ ಚಲನೆಯ ಆಧಾರದ ಮೇಲೆ ಜೋತಿಷ್ಯಶಾಸ್ತ್ರ ನಿಂತಿದೆ. ಗ್ರಹಗಳ ಚಲನೆಯು ಮನುಷ್ಯನ ಮನಸ್ಸಿನ ಮೇಲೆ ಯಾವ ರೀತಿಯಾಗಿ ಪರಿಣಾಮವನ್ನು ಬೀರುತ್ತವೆ ಎಂಬುವುದರ ಆಧಾರದ ಮೇಲೆ ಜೋತಿಷಿಗಳು ಭವಿಷ್ಯವನ್ನು ಹೇಳುತ್ತಾರೆ ಎಂದು ಹೇಳಿದರು.
ರಾಹುಕಾಲ ಅಶುಭ ಕಾಲವೆಂಬ ನಂಬಿಕೆ ಇದೆ. ಆ ಕಾಲದಲ್ಲಿ ಯವುದೇ ಒಳ್ಳೆಯ ಕೆಲಸವನ್ನು ಮಾಡಬಾರದೆಂಬ ಮಾತಿದೆ. ಅದನ್ನು ಅನುಸರಿಸುವರು ಬಹಳಷ್ಟು ಜನರಿದ್ದಾರೆ. ಹಾಗೆಯೇ ದಿನ ಭವಿಷ್ಯವನ್ನೂ ನಂಬುವವರು ಅನೇಕ ಜನರಿದ್ದಾರೆ. ದಿನ ಭವಿಷ್ಯವನ್ನು ನಂಬುವುದು ಬಿಡುವುದು ಅವರವರ ನಂಬಿಕೆಗೆ ಬಿಟ್ಟಿದ್ದು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಷಯದ ಕುರಿತು ವಿದ್ಯಾರ್ಥಿಗಳಾದ ಸುಮಯಾ, ಪ್ರಸಾದ್ ಆಚಾರ್ಯ, ರಕ್ಷಿತ, ಸ್ವಪ್ನ, ಅಕ್ಷತಾ, ಪ್ರತಿಭಾ, ವೈಷ್ಣವಿ, ಪ್ರೀಯ, ಹರ್ಷಿತ್.ಎನ್ ಹಾಗೂ ಭುವನೇಶ್ವರಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಮಣಿಕರ್ಣಿಕ ಕಾರ್ಯಕ್ರಮದ ಕಾರ್ಯದರ್ಶಿ ಪ್ರೆಸಿಲ್ಲಾ ಡಯಾಸ್ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯ ಆರ್. ನಿಡ್ಪಳ್ಳಿ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕವಿತಾ ನಿರೂಪಿಸಿದರು.