ಕ್ರೀಡೆಯಿಂದ ಸಾಮರ್ಥ್ಯ ವೃದ್ಧಿ: ಡಾ. ಕಿಶೋರ್ ಕುಮಾರ್ ಸಿ.ಕೆ.
ಪುತ್ತೂರು: ಕ್ರೀಡೆಯಿಂದ ದೇಹದ ಸಾಮರ್ಥ್ಯ ವೃದ್ಧಿಯಾಗುತ್ತದೆ. ಅಂತೆಯೇ ಒಬ್ಬ ವ್ಯಕ್ತಿ ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ. ಇದರೊಂದಿಗೆ ಒಬ್ಬ ಕ್ರೀಡಾಪಟು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ. ಹೇಳಿದರು
ಅವರು ಶನಿವಾರ ವಿವೇಕಾನಂದ ಕಾಲೇಜಿನಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ನಡೆದ ಅಂತರ್ ಕಾಲೇಜು ಭಾರ ಎತ್ತುವ ಹಾಗೂ ದೇಹರ್ದಾಡ್ಯ ಸ್ಪರ್ಧೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರ ವಿಭಾಗದಲ್ಲಿ ೪೮ಕೆಜಿ, ೫೩ಕೆಜಿ, ೬೩ಕೆಜಿ, ೬೯ಕೆಜಿ, ೭೫ಕೆಜಿ, ಹಾಗೂ +೭೫ಕೆಜಿ ಮತ್ತು ಪುರುಷರ ವಿಭಾಗದಲ್ಲಿ ೫೬, ೬೨ಕೆಜಿ, ೬೯ಕೆಜಿ, ೭೭ಕೆಜಿ, ೮೫ಕೆಜಿ, ೯೪ಕೆಜಿ, ೧೦೫ಕೆಜಿ, +೧೦೫ಕೆಜಿ ವರ್ಗದಲ್ಲಿ ಭಾರ ಎತ್ತುವಿಕೆ ಸ್ಪರ್ಧೆ ಹಾಗೂ ದೇಹದಾರ್ಢ್ಯ ಸ್ಪರ್ಧೆ ನಡೆಯಿತು.
ಈ ಸಂಧರ್ಭದಲ್ಲಿ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ರಾಷ್ಟ್ರಮಟ್ಟದ ಭಾರ ಎತ್ತುಗಾರರಾದ ಎಂ ದಿವಾಕರ ಶೆಟ್ಟಿ ಹಾಗೂ ಪೆರಿಯಡ್ಕ ಸುಬ್ರಾಯ ಶೆಟ್ಟಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಸಂಚಾಲಕ ಜಯರಾಮ್ ಭಟ್ ಎಂ.ಟಿ, ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕ ಹರಿಪ್ರಸಾದ್ ಸ್ವಾಗತಿಸಿದರು, ಅರ್ಥಶಾಸ್ತ್ರ ವಿಬಾಗದ ಉಪನ್ಯಾಸಕ ಡಾ. ಅರುಣ್ ಪ್ರಕಾಶ್ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್.ಎಚ್.ಜಿ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ: ಪುರುಷರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ಪ್ರಥಮ, ಉಜಿರೆಯ ಎಸ್‌ಡಿಎಂ ಕಾಲೇಜು ದ್ವಿತೀಯ, ಎಸ್ ಪಿ ಸಿ ಕಾಲೇಜು ತೃತೀಯ, ಹಾಗೂ ಕಾರ್ಕಳದ ಶ್ರೀ ಧವಳ ಕಾಲೇಜು ನಾಲ್ಕನೇ ಬಹುಮಾನಕ್ಕೆ ಪಾತ್ರವಾದವು. ಮಹಿಳೆಯರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರಥಮ, ಉಜಿರೆಯ ಎಸ್‌ಡಿಯಂ ದ್ವಿತೀಯ, ಪುತ್ತೂರಿನ ವಿವೇಕಾನಂದ ಕಾಲೇಜು ತೃತೀಯ, ಸವಣೂರಿನ ವಿದ್ಯಾ ರಶ್ಮಿ ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ.
ಉತ್ತಮ ಭಾರ ಎತ್ತುಗಾರ ಬಹುಮಾನವನ್ನು ಉಜಿರೆಯ ಎಸ್‌ಡಿಯಂ ಕಾಲೇಜಿನ ಗುರುರಾಜ, ಉತ್ತಮ ಭಾರ ಎತ್ತುಗಾರ್ತಿ ಬಹುಮಾನವನ್ನು ಉಜಿರೆಯ ಎಸ್‌ಡಿಯಂ ಕಾಲೇಜಿನ ತುಶ್ಮಿತಾ, ಉತ್ತಮ ದೇಹದಾರ್ಢ್ಯ ತಂಡ ಸ್ಪರ್ಧೆಯಲ್ಲಿ ಮೂಡುಬಿದ್ರೆಯ ಆಳ್ವಾಸ್ ಪ್ರಥಮ, ಮಿಲಾಗ್ರೀಸ್ ದ್ವಿತೀಯ, ಮಂಗಳೂರಿನ ಗೋಕರ್ಣನಾಥ ಕಾಲೇಜು ತೃತೀಯ, ನಾಲ್ಕನೇ ಬಹುಮಾನವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಹಾಗೂ ಉತ್ತಮ ದೇಹದಾರ್ಢ್ಯ ಬಹುಮಾನವನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ರಕ್ಷಿತ್ ಪಡೆದುಕೊಂಡಿದ್ದಾರೆ.