ವಿವೇಕಾನಂದದಲ್ಲಿ ನಾಯಕತ್ವ ತರಬೇತಿ ಶಿಬಿರ
ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಉದ್ಯೋಗ ಮತ್ತು ತರಬೇತಿ ಘಟಕ ಹಾಗೂ ಮುಂಬಯಿಯ ಎಂ.ಆರ್.ಪೈ ಫೌಂಡೇಶನ್ನ ಜಂಟಿ ಆಶ್ರಯದಲ್ಲಿ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಪ್ರತಿಯೊಬ್ಬನಿಗೂ ಜೀವನದಲ್ಲಿ ಸ್ಪಷ್ಟವಾದ ಗುರಿಯಿರಬೇಕು. ಗುರಿಯನ್ನು ತಲುಪಲು ಸಾಧ್ಯವಾಗದೇ ಇದ್ದರೆ ಅದನ್ನು ದೌರ್ಭಾಗ್ಯ ಅಂದುಕೊಳ್ಳಬೇಕಿಲ್ಲ. ಆದರೆ ಗುರಿಯೇ ಇಲ್ಲದಿದ್ದರೆ ಅದು ದುರಂತವೆನಿಸುತ್ತದೆ. ವಿದ್ಯಾರ್ಥಿಗಳು ವಿವಿಧ ತರಬೇತು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಉದ್ಯೋಗಶೀಲತೆ ಬೆಳೆಯಲು ಸಾಧ್ಯ ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿಗಳಾದ ರಾಜೀವ್ ಲೂ ಹಾಗೂ ಸಚಿನ್ ಕಾಮತ್ ಶಿಬಿರದ ಉದ್ದೇಶಗಳ ಬಗೆಗೆ ಮಾಹಿತಿ ನೀಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ರೇಖಾ ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಜೀವಿತಾ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕ ಗಣೇಶ್ ಪ್ರಸಾದ್ ಸಹಕರಿಸಿದರು. ವಿವಿಧ ಕಾಲೇಜುಗಳ ಒಟ್ಟು ಎಂಬತ್ತು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾದರು.