VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ವಿವೇಕಾನಂದ ಎಂ.ಕಾಂ ನಲ್ಲಿ ಲಕ್ಷ್ಯ – 2016 ಸಮಾರೋಪ

ಪುತ್ತೂರು: ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸುವ ಬಗೆಗೆ ತೀವ್ರ ಲಕ್ಷ್ಯವಿರುವುದು ಸಹಜ. ಆದರೆ ಸ್ಪಧೆಗಳಲ್ಲಿ ಭಾಗವಹಿಸಿದವರೆಲ್ಲರೂ ವಿಜಯಿಗಳಾಗುವುದಿಲ್ಲ ಎಂಬುದೂ ಸತ್ಯ. ಹಾಗಾಗಿ ಸ್ಪಧೆಗಳಲ್ಲಿ ಭಾಗವಹಿಸುವಾಗ ಅನುಭವ ಪಡೆಯುವ ಉದ್ದೇಶವನ್ನೂ ಹೊಂದಿರಬೇಕು. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಆ ಅನುಭವವನ್ನು ಬಳಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.

Jpeg

ಅವರು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಅಂತಿಮ ಎಂ.ಕಾಂ. ವಿದ್ಯಾರ್ಥಿಗಳು ಆಯೋಜಿಸಿದ ಅಂತರ್ ತರಗತಿ ಸ್ಪರ್ಧೆ ಲಕ್ಷ್ಯ-೨೦೧೬ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸ್ಪರ್ಧೆಗಳು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಕಾರಿ. ಅಂತೆಯೇ ಜ್ಞಾನ ವಿಸ್ತರಣೆಯಲ್ಲೂ ಸ್ಪಧೆಗಳ ಪಾತ್ರ ಹಿರಿದಾದದ್ದು ಎಂದರು.

ವಿಭಾಗದ ಮುಖ್ಯಸ್ಥೆ ವಿಜಯ ಸರಸ್ವತಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಅಮೃತ ಸ್ವಾಗತಿಸಿ, ಅಮೃತ ಕೃಷ್ಣ ವಂದಿಸಿದರು.