ವಿವೇಕಾನಂದ ಎಂ.ಕಾಂ ವಿಭಾಗದಿಂದ ಉಪನ್ಯಾಸ ಕಾರ್ಯಕ್ರಮ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ತೆರಿಗೆ ಉಳಿತಾಯ ಹಾಗೂ ಹೂಡಿಕೆ ಯೋಜನೆಗ:ಳು ಎಂಬ ವಿಷಯದ ಬಗೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಪುತ್ತೂರಿನ ಅನುಭವಿ ಲೆಕ್ಕ ಪರಿಶೋಧಕ ತೆರಿಗೆ ಸಲಹೆಗಾರ ಅರವಿಂದ ಕೃಷ್ಣ ಉಳಿತಾಯ ಯೋಜನೆಯ ವಿವಿಧ ಬಗೆ ಹಾಗೂ ಅವಶ್ಯಕತೆಯ ಬಗೆಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಿಭಾಗದ ಪ್ರಾಧ್ಯಾಪಕ ಪ್ರೊ.ಸಂಪತ್ತಿಲ ಈಶ್ವರ ಭಟ್ ವಹಿಸಿದ್ದರು. ಉಪನ್ಯಾಸಕರುಗಳಾದ ಡಾ.ಅರುಣ್ ಪ್ರಕಾಶ್, ವಿಜಯ ಸರಸ್ವತಿ, ಸಂಧ್ಯಾ, ಸಂಗೀತಾ ಅಲ್ಲದೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ, ವಿದ್ಯಾರ್ಥಿ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಧುಶ್ರೀ ಎಂ ಸ್ವಾಗತಿಸಿದರು. ಶಮೀನಾ ಬಿ ವಂದಿಸಿದರು. ರಾಯ್ಲಿನ್ ನಿತೀಶ ವೇಗಸ್ ಕಾರ್ಯಕ್ರಮ ನಿರ್ವಹಿಸಿದರು.