ವಿವೇಕಾನಂದದಲ್ಲಿ ಕೃಷಿ ಯಂತ್ರ ಪ್ರಾತ್ಯಕ್ಷಿಕೆ
ಪುತ್ತೂರು: ಕೃಷಿ ಕ್ಷೇತ್ರದ ಆಧುನಿಕ ತಂತ್ರಜ್ಞಾನಗಳನ್ನು ಯುವಕರಿಗೆ ಪರಿಚಯಿಸುವುದರಿಂದ ಕೃಷಿ ಕ್ಷೇತ್ರ ಆಕರ್ಷಕಗೊಳ್ಳಲು ಸಾಧ್ಯವಿದೆ. ಈಗ ತಂತ್ರಜ್ಞಾನಗಳು ಬೆಳೆದಿದ್ದು, ಕೃಷಿ ಸುಲಭವಾಗುತ್ತಿದೆ. ಆದರೆ ನೂತನ ವಿಚಾರಗಳನ್ನು ತಿಳಿದುಕೊಳ್ಳುವುದು ಇಂದಿನ ಅಗತ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಕೊಡಿಬೈಲ್ ಅಗ್ರೊ ಸಹಯೋಗದೊಂದಿಗೆ ಆಯೋಜಿಸಿದ್ದ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಮಾತನಾಡಿ ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಕೃಷಿ ಹಿನ್ನಲೆಯುಳ್ಳವರು. ಈ ಹಿನ್ನಲೆಯಲ್ಲಿ ಯಂತ್ರಗಳ ಪ್ರಾತ್ಯಕ್ಷಿಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ನಾವೆಷ್ಟೇ ಸಾಧನೆ ಮಾಡಿದರೂ ಮಣ್ಣನ್ನು ಹೊರತುಪಡಿಸಿ ಬದುಕನ್ನು ಕಟ್ಟಿಕೊಳ್ಳಲು ಅಸಾಧ್ಯ ಎಂದರು. ಕೊಡಿಬೈಲ್ ಅಗ್ರೊ ಸಂಸ್ಥೆಯ ನಿರ್ದೇಶಕ ಸೂರ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಪದಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್ ದಾಸ್ ಉಪಸ್ಥಿತರಿದ್ದರು. ಉಪನ್ಯಾಸಕಿ ಮಲ್ಲಿಕಾ ವಿ ಕಾರ್ಯಕ್ರಮ ನಿರ್ವಹಿಸಿದರು.