ಮಳೆ ಸಿಹಿ-ಕಹಿ ಅನುಭವಗಳೆರಡನ್ನೂ ತರಬಲ್ಲುದು : ಅನುಷಾ
ಪುತ್ತೂರು : ಬಾಲ್ಯದ ನೆನಪುಗಳು ಮರುಕಳಿಸಿದಾಗ ಮಳೆಯಲ್ಲಿ ನೆನೆದ ನೆನಪುಗಳು ಪ್ರತಿಯೊಬ್ಬನ ಬದುಕಿನಲ್ಲಿಯೂ ಇದ್ದೆ ಇರುವುದು. ಸಮಾಜದಲ್ಲಿ ಮಳೆಗೆ ಶಪಿಸುವ ವರ್ಗ ಇರುವಂತೆ ಮಳೆಗಾಗಿ ಹಂಬಲಿಸುವಂತ ವರ್ಗವೂ ಇರುತ್ತದೆ. ಮಾತ್ರವಲ್ಲದೇ ಸಿಹಿ ನೆನಪನ್ನು ಹೊತ್ತು ತರಬಲ್ಲ ಮಳೆ ಕಹಿ ನೆನಪನ್ನು ತರಬಲ್ಲದು ಎಂದು ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನುಷಾ ಕೆ. ಹೇಳಿದರು.
ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಳೆಯಲಿ ಜೊತೆಯಲಿ ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ವಿದ್ಯಾರ್ಥಿಗಳಾದ ಪ್ರಥಮ, ಶಿವ ಪ್ರಸಾದ್, ಮಹಮ್ಮದ್ ಆಝಾದ್, ದೀಕ್ಷಿತ್, ಶಿವ ಶಂಕರ್, ಸಾಗರ್ ಹೆಗ್ಡೆ ನಾರಾವಿ, ಶ್ರೇಯಸ್, ಪೂಜಾಶ್ರೀ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್ ಹಾಗೂ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಭವಿಷ್ಯ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಿಯಾ ಕೆ.ಎಸ್. ಸ್ವಾಗತಿಸಿ, ಶಿಲ್ಪಾ ಪೈಲೂರು ಕಾರ್ಯಕ್ರಮ ನಿರ್ವಹಿಸಿದರು. ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು.