ಸ್ವರಕ್ಷಣೆಗೆ ಹೆಲ್ಮೆಟ್ ಅಗತ್ಯ : ವಿಘ್ನೇಶ್ ಭಟ್
ಪುತ್ತೂರು: ಮನುಷ್ಯನ ದೇಹದ ಇತರ ಭಾಗಗಳು ಗಾಯಗೊಂಡ ಸಂದರ್ಭ ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಸರಿಯಾಗಬಹುದು. ಆದರೆ ತಲೆಯು ಅತ್ಯಂತ ಸೂಕ್ಷ್ಮ ಭಾಗವಾಗಿರುವ ಕಾರಣ ಅದರ ಬಗ್ಗೆ ಹೆಚ್ಚಿನ ಕಾಳಜಿ ಅತೀ ಅಗತ್ಯ. ತಲೆಗೆ ಗಂಭೀರ ಗಾಯವಾದರೆ ಸಾಯುವ ಸಂಭವ ಹೆಚ್ಚಿರುತ್ತದೆ ಅಥವಾ ಕೋಮ ಸ್ಥಿತಿಯಲ್ಲಿಯೂ ಇರುವಂತಾಗಬಹುದು. ಅದಕ್ಕಾಗಿ ಹೆಲ್ಮೆಟ್ ಧರಿಸುವುದು ಸೂಕ್ತವಾಗಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಉಪನ್ಯಾಸಕ ವಿಘ್ನೇಶ್ ಭಟ್ ಹೇಳಿದರು.
ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹೆಲ್ಮೆಟ್ ಅವಾಂತರ ಎಂಬ ವಿಶಯದ ಕುರಿತಾಗಿ ಮಾತನಾಡಿದರು.
ಈ ಸಂದರ್ಭ ವಿದ್ಯಾರ್ಥಿಗಳಾದ ದಿವ್ಯಾ ಡಿ.ಪೆರ್ಲ, ಅಝಾದ್ ಕೆ., ಸೀಮಾ, ಶಿವಶಂಕರ ಮಯ್ಯ, ಪೂಜಾಶ್ರೀ, ಭಾಗ್ಯಶೀ ಕೆ.ಬಿ., ನಿಸರ್ಗ ಎಸ್. ಶ್ರೀಕೃತಿ, ಅಕ್ಷಯ ಕೃಷ್ಣ, ಮೆಹರುನಿಸಾ ಬೇಗಂ, ಶಿಲ್ಪಾ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ಕಾರ್ಯಕ್ರಮದ ಕಾರ್ಯದರ್ಶಿ ಭವಿಷ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಿಯಾಶ್ರೀ ಕೆ. ಎಸ್., ಸ್ವಾಗತಿಸಿ, ರಕ್ಷಾ ಎಚ್. ನಿರೂಪಿಸಿದರು. ಉಪನ್ಯಾಸಕಿ ಭವ್ಯ ಪಿ.ಆರ್ ವಂದಿಸಿದರು.