’ಆಧುನಿಕ ಮಾಧ್ಯಮಗಳು ಕನಸಿನ ಲೋಕವನ್ನು ಕಸಿದುಕೊಳ್ಳುತ್ತಿವೆ’
ಪುತ್ತೂರು: ಅಂತರಂಗ ಸದಾ ಹೊಸ ಕನಸನ್ನು ಹುಟ್ಟು ಹಾಕುತ್ತದೆ. ನಾವು ಕಂಡ ಕನಸನ್ನು ತಿಳಿದು ನಮ್ಮನ್ನು ನಾವು ತೆರೆದುಕೊಳ್ಳಬೇಕು. ಮುಂದಿನ ಭವಿಷ್ಯದ ಬದಲಾವಣೆಯ ಬಗ್ಗೆ ಚಿಂತನೆ ನಡೆಸಬೇಕು. ಹೊಸ ಸಂವತ್ಸರ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೇ ಜೀವನದಲ್ಲಿ ಬದಲಾವಣೆಯನ್ನು ಮತ್ತು ಧನಾತ್ಮಕ ಯೋಚನೆಯನ್ನು ತುಂಬುವಂತಿರಬೇಕು ಎಂದು ವಿವೇಕಾನಂದ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಉಪನ್ಯಾಸಕ ಪ್ರಮೋದ್ ಕುಮಾರ್ ಹೇಳಿದರು.
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ’ಹೊಸ ಕನಸು’ ವಿಷಯದ ಕುರಿತು ಮಾತನಾಡಿದರು.
ಕನಸು ನಮ್ಮನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಕನಸು ಮತ್ತು ಕಲ್ಪನೆ ಸಂಬಂಧವನ್ನು ಬೆಸೆಯುವ ವ್ಯವಸ್ಥೆ ಹಾಗೂ ಧನಾತ್ಮಕ ಬದಲಾವಣೆಗೆ ಸಹಾಯ ಮಾಡುತ್ತವೆ. ವರುಷಗಳು ಕಳೆದಾಗ ಕನಸುಗಳು ಬದಲಾಗುತ್ತವೆ. ಆದರೆ ಆಧುನಿಕ ಮಾಧ್ಯಮಗಳು ನಮ್ಮ ಕನಸಿನ ಲೋಕವನ್ನು ಕಸಿದುಕೊಳ್ಳುತ್ತಿವೆ. ಕನಸನ್ನು ಯಶಸ್ಸುಗೊಳಿಸಲು ದೃಢ ನಿರ್ಧಾರವನ್ನು ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿಭಾಗದ ವಿದ್ಯಾರ್ಥಿಗಳಾದ ಸಚಿನ್, ದಿವ್ಯ ಪೆರ್ಲ, ದಿನೇಶ್, ಕಾರ್ತಿಕ್ ಅಮೈ, ಕಾವ್ಯ, ಶಿವಶಂಕರ್, ಅರುಣ್ ಮನೋಹರ್, ಪೂಜಾಶ್ರಿ ಪೈಚಾರ್, ಶಿವಪ್ರಸಾದ್, ಕಾರ್ತಿಕ್ ಅಮೈ, ಮೆಹರುನ್ನೀಸ ಬೇಗಂ, ಪಲ್ಲವಿ, ಕಾವೇರಿ ಡಿ.ಬಿ, ಅಝಾದ್ ಖಂಡಿಗ, ದಿಕ್ಷೀತ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಣಿಕರ್ಣಿಕ ವೇದಿಕೆಯ ಕಾರ್ಯದರ್ಶಿ ಭವಿಷ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿಲ್ಪಾ ಪೈಲೂರು ಸ್ವಾಗತಿಸಿ, ಉಪನ್ಯಾಸಕಿ ಭವ್ಯ ಪಿ.ಆರ್ ವಂದಿಸಿ, ವಿದ್ಯಾರ್ಥಿ ವಿನೋದ್ ಕುಮಾರ್ ಕಂದೂರು ಕಾರ್ಯಕ್ರಮ ನಿರ್ವಹಿಸಿದರು.