ವಿವೇಕಾನಂದ ಸ್ನಾತಕೋತ್ತರ ಕಾಲೇಜಿನಲ್ಲಿ ಸಂದರ್ಶನ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ
ಪುತ್ತೂರು ಡಿ 24: ವಿದ್ಯಾರ್ಥಿಗಳು ಸಂದರ್ಶನಕ್ಕೆ ತೆರಳುವ ಮೊದಲು ಪೂರ್ವತಯಾರಿಯನ್ನು ನಡೆಸಬೇಕು. ಕಂಪನಿಗಳ ಕಾರ್ಯ ವೈಖರಿಯನ್ನು ತಿಳಿದಿರಬೇಕು. ತಾವು ಅಯ್ಕೆ ಮಾಡುವ ಹುದ್ದೆಯ ಬಗ್ಗೆ ಜ್ಞಾನವಿರಬೇಕು. ಸಂದರ್ಶನ ಮಾಡುವ ಅಧಿಕಾರಿಗಳ ಪರಿಚಯವನ್ನು ಮೊದಲೇ ಮಾಡಿಕೊಂಡಿರಬೇಕು ಎಂದು ಮಂಗಳೂರಿನ ಆರ್ಕಿವ ಕಂಪನಿಯ ಹಿರಿಯ ಡೇಟಾ ವಿಶ್ಲೇಷಕ ಅಶೋಕ್ ವಿಲ್ಸನ್ ಡಿಸೋಜಾ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಸ್ನಾತಕೋತ್ತರ ವಾಣಿಜ್ಯಶಾಸ್ತç ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ‘ಸಂದರ್ಶನ ಕೌಶಲ್ಯದ ಅಭಿವೃದ್ಧಿ’ ಎಂಬ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶುಕ್ರವಾರ ಅವರು ಮಾತನಾಡಿದರು.
ತಾವು ಪಡೆದ ಶಿಕ್ಷಣಕ್ಕೆ ಸರಿಯಾದ ಉದ್ಯೋಗವಕಾಶಗಳನ್ನು ಹುಡುಕಬೇಕು. ಸಂದರ್ಶನದಲ್ಲಿ ಭಾಗವಹಿಸುವಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ನಡವಳಿಕೆ ಉತ್ತಮವಾಗಿರಬೇಕು. ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕುವ ಮೊದಲು ಅಲ್ಲಿನ ಉದ್ಯೋಗ ಮಾಹಿತಿಯನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಚುರುಕಾಗಿರಬೇಕು, ಹಾಗಾದಲ್ಲಿ ಮಾತ್ರ ಅವಕಾಶಗಳು ಸಿಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಫ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಸಂದರ್ಶನದಲ್ಲಿ ಹಲವಾರು ವಿಧಗಳಿವೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಂದರ್ಶನವನ್ನು ಎದುರಿಸಿಯೇ ಉದ್ಯೋಗವನ್ನು ಪಡೆಯಲು ಸಾದ್ಯ. ಪ್ರಸ್ತುತ ದಿನಗಳಲ್ಲಿ ಎಲ್ಲವೂ ಆನ್‌ಲೈನ್ ಆಗಿದ್ದು ವಿದ್ಯಾರ್ಥಿಗಳು ಈ ಬದಲಾವಣೆಗೆ ಒಗ್ಗಿಕೊಳ್ಳಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಐಸಿಟಿಯ ಸಂಯೋಜಕ ರೋಹಿತ್ ಕಜಾವ, ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್, ಸ್ನಾತಕೋತ್ತರ ವಾಣಿಜ್ಯಶಾಸ್ತç ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಉಪಸ್ಥಿತರಿದ್ದರು.
ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ನಮೃತ ಕೆ.ಎನ್. ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಧನ್ಯಶ್ರೀ ವಂದಿಸಿದರು. ವಿದ್ಯಾರ್ಥಿನಿ ಪಲ್ಲವಿ ಎ.ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.