ಸ್ನಾತಕೋತ್ತರ ವಾಣಿಜ್ಯ ವಿಭಾಗದ ’ಪಯಣ’ ವೇದಿಕೆ ಉದ್ಘಾಟನೆ – ಹಿರಿಯರ ಅನುಭವ ಕಿರಿಯರಿಗೆ ಪಾಠವಾಗಬೇಕು: ವಿಜಯ ಸರಸ್ವತಿ
ಪುತ್ತೂರು: ಹಿರಿಯ ವಿದಾರ್ಥಿಗಳ ಅನುಭವದ ಮಾರ್ಗದರ್ಶನ ಕಿರಿಯ ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕು. ಪ್ರತಿಯೊಬ್ಬನೂ ತಾನೇ ಎಲ್ಲಾ ಅನುಭವವನ್ನು ಹೊಂದಲು ಸಾಧ್ಯವಿಲ್ಲ. ಹಾಗಾಗಿ ಮತ್ತೊಬ್ಬರ ಅನುಭವದಿಂದಲೂ ಪಾಠ ಕಲಿಯುವಂತಾಗಭೇಕು. ಆಗ ಮಾತ್ರ ಯಶಸ್ಸಿನ ಹಾದಿ ಸುಲಭವೆನಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ವಿಜಯ ಸರಸ್ವತಿ ಹೇಳಿದರು. ಅವರು ವಿಭಾಗದಿಂದ ನೂತನವಾಗಿ ಆರಂಭಿಸಿದ ’ಪಯಣ’ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
’ಪಯಣ’ ಹಿರಿಯ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿರುವ ವೇದಿಕೆ. ಆಗಿಂದಾಗ್ಗೆ ಹಿರಿಯ ವಿದ್ಯಾಥಿಗಳನ್ನು ಈ ವೇದಿಕೆಗೆ ಕರೆಸಿ ಅವರ ಅನುಭವವನ್ನು ಹಂಚಿಕೊಳ್ಳುವಂತೆ ಮಾಡುವುದು ಇದರ ಉದ್ದೇಶ. ವಿಭಾಗದ ಅನೇಕ ಹಿರಿಯ ವಿದೈಆಥಿಗಳು ನಾನಾ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಾರೆ. ಅವರನ್ನೆಲ್ಲ ಈಗಿನ ವಿದ್ಯಾರ್ಥಿಗಳ ಮುಂದೆ ಪ್ರಸ್ತುತ ಪಡಿಸುವುದೇ ಈ ವೇದಿಕೆಯ ಆಶಯ ಎಂದವರು ನುಡಿದರು.
ಹಿರಿಯ ವಿದ್ಯಾರ್ಥಿ, ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕ ಶ್ರೀನಾಥ್ ಮಾತನಾಡಿ ನಾವು ಸಮುದ್ರ ಕಿನಾರೆಯಲ್ಲಿ ಚಿಪ್ಪುಗಳನ್ನರಸುತ್ತಾ ಸಾಗುತ್ತೇವೆ. ಆದರೆ ಸಮುದ್ರಕ್ಕೇ ಧುಮುಕಿ ಮುತ್ತುಗಳನ್ನು ಎತ್ತಿಕೊಳ್ಳಲು ನಾವು ಶಕ್ತರಿದ್ದೇವೆ ಎಂಬುದನ್ನು ಮನಗಾಣುವುದೇ ಇಲ್ಲ. ನಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು ಎಂದರು. ಮತ್ತೋರ್ವ ವಿದ್ಯಾರ್ಥಿನಿ ಪದಿಪೂರ್ವ ಕಾಲೇಜಿನ ಉಪನ್ಯಾಸಕಿ ಉಷಾ ಮಾತನಾಡಿ ಪ್ರತಿಯೊಬ್ಬ ವಿದ್ಯಾತಿಯೂ ನಾನು ಸಾಧಿಸಬಲ್ಲೆ ಎಂಬ ಸಕಾರಾತ್ಮಕ ಧೋರಣೆ ಹೊಂದಬೇಕು ಎಂದರು.
ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ಹರಿಪ್ರಸಾದ್ ಎಸ್ ಸ್ವಾಗತಿಸಿದರು. ಉಪನ್ಯಾಸಕಿ ಸಂಧ್ಯಾ ವಂದಿಸಿದರು. ಉಪನಾಸಕಿ ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.