VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಮಾನ್ಸೂನ್ ಚೆಸ್ ಪಂದ್ಯಾಟ

ಪುತ್ತೂರು : ವಿವೇಕಾನಂದ ಕಾಲೇಜು. ಪುತ್ತೂರು ಇದರ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ 38ನೇ ಮಾನ್‌ಸೂನ್ ಚೆಸ್ ಪಂದ್ಯಾಟವು ಇದೇ ಆಗಸ್ಟ್  ೦3, ೦4 ಮತ್ತು ೦5, 2017 ರಂದು ಕಾಲೇಜಿನ ಸುವರ್ಣಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ಪದವಿ ಕಾಲೇಜು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಪಂದ್ಯಾಟವನ್ನು ಶ್ರೀ ಗಣೇಶ್ ಕೊಟ್ಯಾನ್. ದೈಹಿಕ ಶಿಕ್ಷಣ ನಿರ್ದೇಶಕರು, ಉಪೇಂದ್ರ ಪೈ ಸ್ಮಾರಕ ಕಾಲೇಜು, ಉಡುಪಿ ಇವರು ಉದ್ಘಾಟಿಸಲಿದ್ದಾರೆ. ಬಹುಮಾನ ವಿತರಣೆಯನ್ನು ಶ್ರೀ ಕೇಶವ ಪ್ರಸಾದ್ ಮುಳಿಯ, ಚೇರಮನ್ನರು ಹಾಗೂ ಆಡಳಿತ ನಿರ್ದೇಶಕರು ಮುಳಿಯ ಜ್ಯುವೆಲರ್‍ಸ್ ಪುತ್ತೂರು ಇವರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಜಯರಾಮ್ ಭಟ್ ಎಂ.ಟಿ ವಹಿಸುವರು.

ಆಗಸ್ಟ ೩ ರಂದು ಪೂರ್ವಾಹ್ನ 1೦.೦೦ ಘಂಟೆಗೆ ಪಂದ್ಯಾಟವು ಆರಂಭಗೊಳ್ಳಲಿದ್ದು, ಸ್ವಿಸ್ ಮಾದರಿಯಲ್ಲಿ ನಡೆಯುತ್ತದೆ. ಭಾಗವಹಿಸುವವರು ಚೆಸ್ ಬೋರ್ಡ್ ಮತ್ತು ಚೆಸ್ ದಾಳವನ್ನು ಸ್ವತಃ ತರಬೇಕು ಹಾಗೂ ಪ್ರಾಂಶುಪಾಲರ ಸಹಿ ಇರುವ ಗುರುತಿನ ಪತ್ರವನ್ನು ಹೊಂದಿರಬೇಕು.

ಪಂದ್ಯಾಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಪ್ರವೇಶಪತ್ರ ಮತ್ತು ಶುಲ್ಕ ರೂ 50.೦೦ ನ್ನು ಪ್ರಾಂಶುಪಾಲರು, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನೆಹರು ನಗರ, ಪುತ್ತೂರು ದ.ಕ-574203 ಇವರಿಗೆ ಪಾವತಿಸಬೇಕು.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿಜೇತರಿಗೆ ಶಾಶ್ವತ ಫಲಕ ಮತ್ತು ಉತ್ತಮ 10 ಮಂದಿ ಆಟಗಾರರಿಗೆ ಪ್ರಮಾಣಪತ್ರದೊಂದಿಗೆ ಸ್ಮರಣಿಕೆ ನೀಡಲಾಗುತ್ತದೆ. ಎಲ್ಲಾ ಆಟಗಾರರಿಗೆ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಗುತ್ತದೆ.

ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಆಗಸ್ಟ್ 01, 2017 ನೇ ದಿನಾಂಕದ ಮೊದಲು ತಮ್ಮ ಪ್ರವೇಶವನ್ನು ನೊಂದಾಯಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರವಿಶಂಕರ್ ವಿ. ಎಸ್ ಇವರನ್ನು ಸಂಪರ್ಕಿಸಬಹುದು.