ಜೀವಿಗಳ ಪರಿಚಯವೇ ಸಂರಕ್ಷಣೆಯ ಮೊದಲ ಹಂತ: ತೇಜಸ್ವಿನಿ
ಪುತ್ತೂರು: ಗಿಡ ಮರಗಳನ್ನು ಬೆಳೆಸುವುದರಿಂದ ಪ್ರಕೃತಿಯನ್ನು ಸಂರಕ್ಷಿಸಲು ಸಾದ್ಯವಾಗುತ್ತದೆ. ಇದರಿಂದ ಕೃತಕ ನೆರೆಯನ್ನು ತಡೆಗಟ್ಟಬಹುದು. ಪ್ರಕೃತಿಯಲ್ಲಿ ಪ್ರತಿ ಸಸ್ಯ, ಪ್ರಾಣಿ, ಪಕ್ಷಿ, ಕೀಟಗಳಿಗೆ ಅದರದ್ದೇ ಆದ ಮಹತ್ವವಿದೆ. ಪ್ರತಿ ಜೀವಿಗಳ ಪರಿಚಯ ಮಾಡಿಕೊಳ್ಳುವುದೇ ಸಂರಕ್ಷಣೆಯ ಮೊದಲ ಹಂತ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ತೇಜಸ್ವಿನಿ ಬಿ.ಜಿ ಹೇಳಿದರು
ಅವರು ಕಾಲೇಜಿನ ನೇಚರ್ಸ್ ಕ್ಲಬ್ನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಜೀವಶಾಸ್ತ್ರದ ಕಲಿಕೆಯು ಜೀವನದಲ್ಲಿ ಹೊಸ ಪಾಠಗಳನ್ನು ಕಲಿಯುವಂತೆ ಮಾಡುತ್ತದೆ. ಸಸ್ಯಗಳ ಬಗ್ಗೆ ಮಾಹಿತಿಗಳನ್ನು ಪಡಕೊಳ್ಳುವುದರಿಂದ ನಮ್ಮ ಮುಂದಿನ ಜೀವನಕ್ಕೆ ತುಂಬಾ ಸಹಕಾರಿಯಾಗುತ್ತದೆ. ಪ್ರಕೃತಿಯ ಬಗ್ಗೆ ತಿಳಿಯಬೇಕು ಎಂದಾದರೆ ನಾವು ಅದರ ಭಾಗವಾಗಿ ಕಾರ್ಯನಿರ್ವಹಿಸಬೇಕು. ಅವೈಜ್ಞಾನಿಕ ಕಾಮಗಾರಿಗಳಿಂದ ನಮ್ಮ ಪರಿಸರವು ಹೇಗೆ ವಿನಾಶದತ್ತ ಸಾಗುತ್ತದೆ ಎಂದು ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಗಣಿತ ಶಾಸ್ತ್ರ ವಿಬಾಗದ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಮಾತನಾಡಿ ಪ್ರಕೃತಿಯ ಸಂರಕ್ಷಣೆ ನಮ್ಮ ಕೈಯಲ್ಲಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಇಂದು ಮುಖ್ಯವಾಗಿ ಮಾಡಬೇಕಾದ ಕಾರ್ಯ ಎಂದು ನುಡಿದರು.
ಪ್ರಾಣಿಶಾಸ್ರ್ತ ವಿಭಾಗದ ಮುಖ್ಯಸ್ಥ ಈಶ್ವರ್ ಭಟ್ ಸ್ವಾಗತಿಸಿ, ಸಂಘದ ವಿದ್ಯಾರ್ಥಿ ನಾಯಕಿ ಮನ್ವಿತ ವಂದಿಸಿದರು. ವಿದ್ಯಾರ್ಥಿನಿ ಸುಚೇತಾ ಕಾರ್ಯಕ್ರಮವನ್ನು ನಿರ್ವಹಿಸಿದರು.