VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ವಿವೇಕಾನಂದ ಶಿಕ್ಷಕೇತರರ ಸಂಘಕ್ಕೆ ಆಯ್ಕೆ

ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಶಿಕ್ಷಕೇತರ ನೌಕರರ ಸಂಘದ ೨೦೧೫-೧೬ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು. ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಗೌರವಾಧ್ಯಕ್ಷರಾಗಿ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಕಛೇರಿ ಉದ್ಯೋಗಿ ಗುರುರಾಜ್ ಕೆ.ಪಿ.ಅಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿವೇಕಾನಂದ ಕಾಲೇಜಿನ ಮೋಹನ ಎನ್ ಆಯ್ಕೆಯಾದರೆ ಶಿವಕುಮಾರ್ ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡರು. ಉಳಿದಂತೆ ಶುಭಾ ಕಾಮತ್ ಜತೆಕಾರ್ಯದರ್ಶಿ, ದಿವ್ಯ ಕೋಶಾಧಿಕಾರಿ, ರಾಜೀವ ಮಣಿಯಾಣಿ ಸಮಯ ಶಿಸ್ತು ಪಾಲಕರಾಗಿ ಆಯ್ಕೆಯಾದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್ ದಾಸ್ ಎ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷೆ ನಿರ್ಮಲಾ ಜನಾರ್ಧನ್ ಕಾರ್ಯಕ್ರಮ ನಡೆಸಿಕೊಟ್ಟರು. ಗುರುರಾಜ್ ವರದಿ ವಾಚಿಸಿದರು. ವತ್ಸಲ ಲೆಕ್ಕಪತ್ರ ಮಂಡಿಸಿದರು. ಮುರಳೀಧರ ಸ್ವಾಗತಿಸಿ ಎನ್.ಮೋಹನ ವಂದಿಸಿದರು.