VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ಎನ್.ಎಸ್.ಎಸ್ ಧನಾತ್ಮಕ ಯೋಚನೆಗೆ ಸಹಕಾರಿ: ವಿದ್ಯಾ ಎಸ್

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹೊಸ ಹೊಸ ವಿಚಾರಗಳ ಬಗ್ಗೆ ತಿಳಿಯಲು ಕೂಡ ಇದರಿಂದ ಸಾಧ್ಯ. ಈ  ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಯೋಚನೆಗಳನ್ನು ತರಲು ಸಹಾಯ ಮಾಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಸಮಾಜಶಾಸ್ರ್ತ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಹೇಳಿದರು.

ಅವರು ಕಾಲೇಜಿನ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಸೇವಾ ಯೋಜನೆಯ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಶ್ರದ್ದೆಯಿಂದ ಮಾಡಬೇಕು. ನೀಡಿರುವ ಎಲ್ಲಾ ಕೆಲಸಗಳನ್ನು ಅವಧಿಗೆ ಸರಿಯಾಗಿ ಮಾಡಿ ಮುಗಿಸಬೇಕು. ಸೇವಾ ಯೋಜನೆ ಕೇವಲ ಮೈ ಬಗ್ಗಿಸಿ ಕೆಲಸ ಮಾಡಲು ಇರುವಂತಹದ್ದಲ್ಲ, ಬದಲಾಗಿ ವ್ಯಕ್ತಿತ್ವ ನಿರ್ಮಾಣದ ಕಾರ್ಯ ನಡೆಯುತ್ತದೆ  ಎಂದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕಷ್ಟದ ದಿನಗಳು ಬಂದಾಗ ಅದನ್ನು ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿ ದೆಸೆಯಲ್ಲೇ ಕಲಿತುಕೊಳ್ಳಬೇಕು. ಹಂತ ಹಂತವಾಗಿ ನಮ್ಮ ಬೆಳವಣಿಗೆಯು ಆರಂಭಗೊಳ್ಳಬೇಕು. ನಮಿಸುವ ಕೈಗಳಿಗಿಂತ ಕೆಲಸ ಮಾಡುವ ಕೈಗಳೆ ಶ್ರೇಷ್ಟ ಎಂಬ ಮಾತಿನಂತೆ ಎಲ್ಲಿ ನಮಿಸಬೇಕೊ ಅಲ್ಲಿ ನಮಿಸಬೇಕು. ಹಾಗೆಂದು ಎಲ್ಲಾ ಕಡೆಗಳಲ್ಲಿ ಅದನ್ನು ಮಾಡುವ ಬದಲು ಸಮಯಕ್ಕೆ ಸರಿಯಾಗಿ ಒಳ್ಳೆಯ ಕಾಯಕವನ್ನು ಮಾಡಬೇಕು ಎಂದರು.

ಕಾಲೇಜಿನ ರಾಜಕೀಯಶಾಸ್ತ್ರ ಉಪನ್ಯಾಸಕಿ, ಎನ್.ಎಸ್.ಎಸ್ ಅಧಿಖಾರಿ ಅನಿತಾ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಎನ್.ಎಸ್.ಎಸ್ ಯೋಜನಾಧಿಕಾರಿಗಳಲ್ಲೊಬ್ಬರಾದ ಶ್ರೀನಾಥ್ ಸ್ವಾಗತಿಸಿ, ಉಪನ್ಯಾಸಕಿ ಜ್ಯೋತಿ ವಂದಿಸಿದರು. ವಿದ್ಯಾರ್ಥಿನಿ ದೀಕ್ಷ ಕಾರ್ಯಕ್ರಮ ನಿರ್ವಹಿಸಿದರು.