ವಿವೇಕಾನಂದದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಮಾಹಿತಿ
ಪುತ್ತೂರು : ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂಖಿ ಇಘಿಂಒ ಕುgರಿತ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಮಂಗಳೂರಿನ ಟೈಮ್ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಆಶಿತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ, ಉನ್ನತ ಶಿಕ್ಷಣದ ಪ್ರಾಮುಖ್ಯತೆ, ಎಂ ಬಿ ಎ ಯ ಬಗೆಗಿನ ಪರೀಕ್ಷೆ ಹಾಗೂ ವೇಳಾಪಟ್ಟಿಯ ಬಗ್ಗೆ ತಿಳಿಸಿದರು.
ಎಂ ಬಿ ಎಯ ವಿಶೇಷತೆ ಮತ್ತು ಅದನ್ನು ಹೊಂದಿರುವ ಅತ್ಯುತ್ತಮ ಕಾಲೇಜುಗಳ ಬಗ್ಗೆ ತಿಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಎಟಿ, ಎಕ್ಸ್‌ಎಟಿ, ಎಂಎಟಿ, ಸಿಎಂಎನ್‌ಟಿ ಅಂತೆಯೇ ಪಿಜೆಸಿಇಟಿಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟ್ರಮಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಭಾಗದ ಉಪನ್ಯಾಸಕಿ ರೇಖಾ ಸ್ವಾಗತಿಸಿದರು. ಉಪನ್ಯಾಸಕಿ ರವಿಕಲಾ ವಂದಿಸಿದರು.