ಸುಬ್ರಹ್ಮಣ್ಯ ಈಶ್ವರ ಭಟ್ಗೆ ಡಾಕ್ಟರೇಟ್
ಪುತ್ತೂರು:ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ಈಶ್ವರ ಭಟ್ರವರಿಗೆ ಸುರತ್ಕಲ್ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಇವರು ಎನ್ಐಟಿಕೆ ಯ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದರ್ಶಕ್ ಆರ್. ತ್ರಿವೇದಿ ಅವರ ಮಾರ್ಗದರ್ಶನದಲ್ಲಿ ಡೆವಲಪ್ಮೆಂಟ್ ಆಫ್ ಸಿಂಥೆಟಿಕ್ ರೂಟ್ಸ್ ಫಾರ್ ಕಾರ್ಬನ್- ಕಾರ್ಬನ್ ಅಂಡ್ ಕಾರ್ಬನ್ ಹೆಟಿರೋ ಆಟಮ್ ಬಾಂಡ್ ಫಾರ್ಮೇಶನ್ ಅಂಡರ್ ಸೋಲ್ವೆಂಟ್ – ಅಂಡ್ ಕೆಟಲಿಸ್ಟ್ – ಫ್ರೀ ಕಂಡಿಷನ್ಸ್ ಎಂಬ ವಿಷಯದ ಕುರಿತು ಪ್ರೌಢ ಪ್ರಬಂಧವನ್ನು ಮಂಡಿಸಿದ್ದರು. ಇವರು ಉತ್ತರ ಕನ್ನಡದ ಕುಮಟಾದ ಈಶ್ವರ ನಾರಾಯಣ ಭಟ್ ಹಾಗೂ ಗಂಗೂ ಈಶ್ವರ ಭಟ್ ದಂಪತಿಯ ಪುತ್ರ.