VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿಷ್ಣು ಕುಮಾರ್ಗೆ ಡಾಕ್ಟರೇಟ್ ಪದವಿ

14-4 Vishnu Kumar Aಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ವಿಷ್ಣು ಕುಮಾರ್ ಎ ಇವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.     ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ ’ಇಕನಾಮಿಕ್ಸ್ ಆಫ್ ಪ್ರೊಡಕ್ಷನ್ ಅಂಡ್ ಮಾರ್ಕೆಟಿಂಗ್ ಆಫ್ ವೆನಿಲ್ಲ – ಎ ಕೇಸ್ ಸ್ಟಡಿ ಇನ್ ಡಿ.ಕೆ.ಡಿಸ್ಟ್ರಿಕ್ಟ್’ ಅನ್ನುವ ವಿಷಯವಾಗಿ ಇವರು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಈ ಪದವಿಯನ್ನು ನೀಡಿದೆ. ಇವರು ಎಸ್.ರಾಮ ಭಟ್ ಅಟ್ಲಾರು ಹಾಗೂ ಶಂಕರಿ ದಂಪತಿಯ ಪುತ್ರ.