ಎಂ.ಉಮಾದೇವಿಗೆ ಡಾಕ್ಟರೇಟ್
ಇಲ್ಲಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಎಂ.ಉಮಾದೇವಿ ಇವರು ಭಾಸ ನಾಟಕೇಷು ಸ್ತ್ರೀ ಪಾತ್ರಾಣಾಂ ಸಮೀಕ್ಷಾತ್ಮಕ ಅಧ್ಯಯನಂ ಎಂಬ ವಿಷಯದ ಬಗೆಗೆ ಸಿದ್ಧಪಡಿಸಿದ ಪ್ರೌಢ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೆ.ನಾರಾಯಣ ಭಟ್ಟರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿರುವ ಇವರು ಚಾಲತ್ತಡ್ಕ ಸುಬ್ರಹಣ್ಯ ಭಟ್ ಅವರ ಪತ್ನಿ.