ವಿವೇಕಾನಂದದ ದಿವ್ಯಶ್ರೀಗೆ 8th Rank
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಬಿಎಸ್ಸಿ ಪಿ.ಎಂ.ಸಿ ವಿಭಾಗದ ವಿದ್ಯಾರ್ಥಿನಿ ದಿವ್ಯಶ್ರೀ ಬಿ ಇವರು ಮಂಗಳೂರು ವಿಶ್ವವಿದ್ಯಾನಿಲಯದ 2015-16ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಿಎಸ್ಸಿ ವಿಭಾಗದಲ್ಲಿ ಎಂಟನೇ rank ಪಡೆದುಕೊಂಡಿದ್ದಾರೆ. ಗರಿಷ್ಟ 5000 ಅಂಕಗಳಲ್ಲಿ 4809 ಅಂಕ ಗಳಿಸುವುದರ ಮೂಲಕ ಇವರು ಈ ಸಾಧನೆಗೈದಿರುತ್ತಾರೆ. ಇವರು ಸುಳ್ಯದ ಕೃಷಿಕ ಬಾಲಚಂದ್ರ ಹೊಳ್ಳ ಹಾಗೂ ವಿಜಯಲಕ್ಷ್ಮೀ ದಂಪತಿಯ ಪುತ್ರಿ.