ವಿವೇಕಾನಂದದಲ್ಲಿ ಯೂತ್ ರೆಡ್ಕ್ರಾಸ್ ಯುನಿಟ್ ಉದ್ಘಾಟನೆ
ಪುತ್ತೂರು: ರೆಡ್ ಕ್ರಾಸ್ ಎನ್ನುವುದು ಪ್ರಕೃತಿ ವಿಕೋಪದಂತಹ ಗಂಭೀರ ಸಂದರ್ಭಗಳನ್ನೂ ಒಳಗೊಂಡಂತೆ ಅವಶ್ಯಕವೆನಿಸಿದ ಎಲ್ಲಾ ಸನ್ನಿವೇಶಗಳಲ್ಲೂ ಸಾಮಾಜಿಕ ಸೇವೆ ಬದ್ಧವಾಗಿರುವ ಸಂಸ್ಥೆ. ಆದ್ದರಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ಅದು ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್‌ನ ಸದಸ್ಯ ಸಂತೋಷ್ ಪೀಟರ್ ಡಿಸೋಜ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಯೂತ್ ರೆಡ್ಕ್ರಾಸ್ ಯುನಿಟ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮೊಬೈಲ್‌ಗಳಲ್ಲಿ ಪೋಲಿಸ್ ಸ್ಟೇಷನ್, ಅಗ್ನಿಶಾಮಕ ದಳ, ಆಸ್ಪತ್ರೆ, ಬ್ಲಡ್ ಬ್ಯಾಂಕ್ ಹಾಗೂ ತಮ್ಮ ಮನೆಯ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಂಡಿರಬೇಕು. ಅದರಲ್ಲೂ ತಮ್ಮ ಮನೆಯ ಸಂಖ್ಯೆಯನ್ನು ಹೋಮ್ ಎಂದೇ ಸೇವ್ ಮಾಡಿಟ್ಟುಕೊಳ್ಳುವುದು ಅಗತ್ಯ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಾ.ಅರುಣ್ ಪ್ರಕಾಶ್, ಕೆ.ಎಸ್.ಈಶ್ವರ ಪ್ರಸಾದ್, ಹರಿಣಿ ಪುತ್ತೂರಾಯ ಹಾಗೂ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಾಕ್ಷ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕ ಸುಹಾಸ್ ಕೃಷ್ಣ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರದ್ಧಾ ಎಂ ವಂದಿಸಿದರು. ಉಪನ್ಯಾಸಕಿ ಡಾ.ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.