ಪದವಿ ಪರೀಕ್ಷೆ: ವಿವೇಕಾನಂದ ಬಿಸಿಎಗೆ 100% ಫಲಿತಾಂಶ, ಬಿ.ಎ 91.8%
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯವು 2016–17ನೇ ಸಾಲಿನಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಗಳಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿನ ಬಿ.ಸಿ.ಎ ವಿಭಾಗವು 100% ಫಲಿತಾಂಶವನ್ನು ದಾಖಲಿಸಿದೆ. ಅಂತೆಯೇ ಬಿ.ಎ ವಿಭಾಗದಲ್ಲಿ 91.8% ಫಲಿತಾಂಶ ದಾಖಲಾಗಿದೆ. ಉಳಿದಂತೆ ಬಿ.ಎಸ್ಸಿ ವಿಭಾಗದಲ್ಲಿ 87%, ಬಿ.ಕಾಂ ನಲ್ಲಿ 85%, ಬಿಬಿಎಂ ನಲ್ಲಿ 70% ಫಲಿತಾಂಶ ದೊರಕಿರುತ್ತದೆ.