ಸಾಹಿತ್ಯವು ವೈವಿದ್ಯಪೂರ್ಣವಾಗಿರಬೇಕು: ಡಾ.ಮನಮೋಹನ್
ಪುತ್ತೂರು: ಸಾಹಿತ್ಯವು ಹೊಸ ಬರವಣಿಗೆ ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತದೆ. ಚಿತ್ತ ಮನಸ್ಸು, ಬುದ್ಧಿಯನ್ನು ಒಂದುಗೂಡಿಸಿ ಸಾಹಿತ್ಯ ರಚಿಸಿದರೆ ಅದು ಹೊಸ ರೂಪವನ್ನು ತಾಳುತ್ತದೆ. ಅಂತೆಯೇ ಸಾಹಿತ್ಯವು ಸೌಂದರ್ಯ ಪ್ರಜ್ಞೆಯನ್ನೂ ಕೊಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ಮನಮೋಹನ್ ಹೇಳಿದರು.
ಅವರು ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸಿದ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು.
ಕವಿ ಮತ್ತು ಓದುಗ ಇಬ್ಬರೂ ಸಮಾನರು, ಕವಿ ಎತ್ತಕ್ಕೇರಿ ಕವಿತೆಗಳನ್ನು ಬರೆದಾಗ ಓದುಗನೂ ಅಷ್ಟೆ ಎತ್ತರಕ್ಕೇರಿ ಕವಿತೆಗಳನ್ನು ಓದಬೇಕು. ಕನ್ನಡ ಸಾಹಿತ್ಯ ಜಗತ್ತಿನ ಶ್ರೇಷ್ಟ ಕವಿಗಳಾದ ರನ್ನ, ಪೊನ್ನ, ಜನ್ನ ಬಸವಣ್ಣ ಹೀಗೆ ಹಲವರು ಜನ ತಮ್ಮ ತಮ್ಮದೆ ಆದ ಶೈಲಿಯಲ್ಲಿ ಕಾವ್ಯ ರಚಿಸಿದ್ದಾರೆ. ಅಂದಿನ ಕವಿಗಳು ಒಂದೆ ತೆರನಾದ ಕವಿತೆಗಳನ್ನು ರಚಿಸುತ್ತಿರಲಿಲ್ಲ, ಎಲ್ಲವು ಪರಸ್ಪರ ಬಿನ್ನವಾಗಿತ್ತು ಎಂದು ನುಡಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ವಿಭಾಗದ ಉಪನ್ಯಾಸಕಿ ಡಾ.ಗೀತಾ ಕುಮಾರಿ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೊಸ ಹೊಸ ರೀತಿಯಲ್ಲಿ ಬರೆಯುಲು ಒಳ್ಳೆಯ ಓದುವಿಕೆ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ಯುವ ಕವಿಗಳಾದ ವೈಷ್ಣವಿ ಪೈ, ಆಶಾದೇವಿ, ಸೌಜನ್ಯ, ವೃಂದ ಮತ್ತು ಪ್ರತಿಮ ಭಟ್ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಕಾರ್ಯಕ್ರಮದ ಕಾರ್ಯದರ್ಶಿ ಜೀವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿ, ವಿದ್ಯಾರ್ಥಿನಿ ಚೈತ್ರ ಕುಮಾರಿ ವಂದಿಸಿದರು.