ಗುರುಶಿಷ್ಯರ ಹೃದಯ ಸಾಮಿಪ್ಯದಿಂದ ಜ್ಞಾನಧಾರೆ ಸಾಧ್ಯ : ಪ್ರೊ.ವೇದವ್ಯಾಸ
ಪುತ್ತೂರು: ಗುರು ಎಂದರೆ ಅಂಧಕಾರ ನಿರೋದಕ. ನಮ್ಮ ಜೀವನದ ಬೆಳಕನ್ನು ಚೆಲ್ಲುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ಹಿರಿಯರಲ್ಲಿನ ಶಕ್ತಿ ಬಳುವಳಿಯಾಗಿ ಚಿಕ್ಕವರಿಗೆ ಬರುತ್ತದೆ. ಗುರು ಶಿಷ್ಯರ ಎರಡು ಹೃದಯ ಸಮೀಪವಾದಾಗ ಜ್ಞಾನ ಧಾರೆಯಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪಾಚಾರ್ಯ ಪ್ರೊ.ವೇದವ್ಯಾಸ ರಾಮಕುಂಜ ಹೇಳಿದರು.
ಅವರು ಕಾಲೇಜಿನ ವಿಕಾಸಂ ಸಂಸ್ಕೃತ ಸಂಘದ ಆಯೋಜನೆಯಲ್ಲಿ ನಡೆದ ಸಂಸ್ಕೃತ ಸಂಘದ ಉದ್ಘಾಟನಾ ಮತ್ತು ವೇದಾವ್ಯಾಸ ಜಯಂತಿಯ ಆಚರಣೆಯಲ್ಲಿ ವ್ಯಾಸೋಪನ್ಯಾಸಕರಾಗಿ ಆಗಮಿಸಿ ಗುರುವಾರ ಮಾತನಾಡಿದರು.
ಗುರುಗಳಿಂದ ಒಳ್ಳೆಯ ಗುಣ ನಡತೆಯನ್ನು ಕಲಿಯಬೇಕ. ಅವರು ನಡೆದ ಹಾದಿಯನ್ನು ಪರೀಶಿಲಿಸಿ ಮುನ್ನಡೆಯಲು ಪ್ರಾರಂಭಿಸಬೇಕು. ಯಾವುದೇ ಪೂಜೆ ಪುರಸ್ಕಾರವು ಆರಂಭಗೊಳ್ಳುವ ಮೊದಲು ಗುರುವನ್ನು ನೆನೆಯುವ ವಾಡಿಕೆ ಪುರಾಣದಿಂದಲೆ ಬಂದಿದೆ. ವಿದ್ಯಾದಾತನ ಆಶೀರ್ವಾದವನ್ನು ಪಡೆದರೆ ನಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರಲ್ಲದೆ ಪರಮಗುರುಗಳಾದ ವೇದವ್ಯಾಸರು ಭಗವಂತನ ಸ್ವರೂಪ ಅವರು ಜ್ಞಾನಿಗಳ ಜ್ಞಾನಿ ಹಾಗೂ ಋಷಿಗಳ ಋಷಿ. ವೇದವ್ಯಾಸ ಎಂದರೆ ಅದು ಹೆಸರಲ್ಲ ಅದೊದು ಉನ್ನತ ಹುದ್ದೆ.. ನಮ್ಮ ದೇಶಕ್ಕೆ ವ್ಯಾಸರ ಕೊಡುಗೆ ಅಪಾರ. ವೇದಗಳ ಆದಾರದ ಮೇಲೆ ಇಂದಿನ ವಿಜ್ಞಾನದ ಆವಿಷ್ಕಾರಗಳು ನಡೆಯುತ್ತಿವೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಜಯಾರಾಮ ಭಟ್ ಎಂ.ಟಿ ಮಾತನಾಡಿ ವಿದ್ಯಾರ್ಜನೆಯೊಂದಿಗೆ ವೇದ ಪಾರಾಯಣ, ಪಂಚಾಂಗ ಜ್ಞಾನವನ್ನು ಕಲಿಯುವತ್ತ ಅಸಕ್ತಿ ನೀಡಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸಂಸ್ಕೃತ ಭಾಷೆಯು ಅತ್ಯಂತ ಪ್ರಾಚೀನ ಕಾಲದಿಂದಲೆ ಇದ್ದ ಐತಿಹಾಸಿಕ ಹಿನ್ನಲೆಯುಳ್ಳ ಭಾಷೆ. ಜರ್ಮನ್ ಮತ್ತು ಸಂಸ್ಕ್ರತ ಭಾಷೆಗೆ ಸಾಮ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಕೃತ ಸಂಘದ ವತಿಯಿಂದ ಪ್ರೊ.ವೇದವ್ಯಾಸ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಮುಖ್ಯಸ್ಥ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀದರ್ ಎಚ್.ಜಿ, ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ.ಉಮಾದೇವಿ ಹಾಗು ಸಂಸ್ಕೃತ ಸಂಘದ ಅಧ್ಯಕ್ಷೆ ಕಾವ್ಯರತ್ನ ಮತ್ತು ಕಾರ್ಯದರ್ಶಿ ನವನೀತ್ ಉಪಸ್ಥಿರಿದ್ದರು. ಸಂಸ್ಕೃತ ಸಂಘದ ಸಂಚಾಲಕ ಡಾ.ಶ್ರೀಶ ಕುಮಾರ್ ಪ್ರಸ್ಥಾವಿಸಿದರು. ವಿದ್ಯಾರ್ಥಿನಿ ದೀಕ್ಷಿತ ಸ್ವಾಗತಿಸಿ, ವಿದ್ಯಾರ್ಥಿನಿ ಅಪೂರ್ವ ವಂದಿಸಿದರು. ವಿದ್ಯಾರ್ಥಿನಿ ಸಂಹಿತ ಕಾರ್ಯಕ್ರಮ ನಿರ್ವಹಿಸಿದರು.