ವಿಜ್ಞಾನವೆಂಬುದು ಸಾಗರವಿದ್ದಂತೆ : ಡಾ.ಸಂಕೀರ್ತ್ ಹೆಬ್ಬಾರ್
ಪುತ್ತೂರು: ವಿಜ್ಞಾನವೆಂಬುದು ಸಾಗರವಿದ್ದಂತೆ. ಓದಿದಷ್ಟು ಮುಗಿಯದ ಪುಸ್ತಕವಿದ್ದಂತೆ. ನಮ್ಮ ಜ್ಞಾನವನ್ನು ವಿಜ್ಞಾನವೆಂಬ ಮಹಾನ್ ಸಾಗರಕ್ಕೆ ವಿಸ್ತರಿಸಬೇಕು. ಸಾದ್ಯವಾದಷ್ಟು ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಗೊಳಿಸಬೇಕು. ಹೊಸತನ್ನು ಅನ್ವೇಷಿಸುವುದು ನಮ್ಮ ಹವ್ಯಾಸವಾಗಬೇಕು ಎಂದು ರಾಮಕುಂಜೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ.ಸಂಕೀರ್ತ್ ಹೆಬ್ಬಾರ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ವಿಜ್ಞಾನ ಸಂಘವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಉನ್ನತ ಶಿಕ್ಷಣವಾದ ಬಳಿಕ ಸಂಶೋದನೆಯತ್ತ ಗಮನ ನೀಡಬೇಕು. ಅದಕ್ಕಾಗಿ ಪ್ರಸ್ತುತ ಸರಕಾರದಿಂದ ವಿದ್ಯಾರ್ಥಿ ವೇತನವು ದೊರಕುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಸಹಾಯ ಆಗುವಂತಹ ಹೊಸ ಆವಿಷ್ಕಾರ ಮಾಡಬೇಕು. ತಂತ್ರಜ್ಞಾನವು ಮುಂದೆ ಹೋಗುತ್ತಿದ್ದಂತೆ ಅದರ ಬಳಕೆಯು ಸಾಮಾನ್ಯ ಜನರಿಗೂ ತಲುಪವಂತೆ ಆಗಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಿದ್ಯಾರ್ಥಿಗಳು ಕ್ರೀಯಾಶೀಲರಾಗಿರಬೇಕು. ಉತ್ತಮ ನಾಯಕತ್ವ ಗುಣವನ್ನು ಹೊಂದಿ ಜೀವನದಲ್ಲಿ ಮುಂದೆ ಬರಬೇಕು. ನಮಗೆ ತಿಳಿದಿರುವ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳಬೇಕು ಎಂದರು.
ಭೌತಶಾಸ್ರ್ತ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಪ್ರಸ್ಥಾವನೆಗೈದರು. ವಿಜ್ಞಾನ ಸಂಘದ ಕಾರ್ಯದರ್ಶಿ ಅರ್ಚನ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ನಿಕೇತ್ ಸ್ವಾಗತಿಸಿ, ವಿದ್ಯಾರ್ಥಿ ಶ್ರೀಕಾಂತ್ ವಂದಿಸಿದರು. ವಿದ್ಯಾರ್ಥಿನಿ ರೂಪಶ್ರೀ ಕಾರ್ಯಕ್ರಮ ನಿರ್ವಹಿಸಿದರು.