ವಿವೇಕಾನಂದದಲ್ಲಿ ವಿಜ್ಞಾನ ಸಂಘದಿಂದ ಕಾರ್ಯಕ್ರಮ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಿಜ್ಞಾನ ಸಂಘ ಹಾಗೂ ನೇಚರ್ ಕ್ಲಬ್ನ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಅಂಡರ್ಸ್ಟಾಂಡಿಂಗ್ ನೇಚರ್ – ನೀಡ್ ಆಫ್ ದಿ ಡೇ ಅನ್ನುವ ವಿಚಾರದ ಬಗೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಅಂತರರಾಷ್ಟ್ರೀಯ ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ ಉಪನ್ಯಾಸ ನೀಡಿದರು.
ಅವರು ಮಾತನಾಡಿ ವಿಜ್ಞಾನ ಎಂಬುದು ಪರಿಸರವನ್ನು ಅರಿತುಕೊಳ್ಳುವುದೇ ಆಗಿದೆ. ಮಾನವನ ಎಲ್ಲಾ ಆವಿಷ್ಕಾರಗಳೂ ಕೂಡ ಪರಿಸರ ಮೂಲದಿಂದಲೇ ಬಂದಹಂತವುಗಳಾಗಿವೆ. ಮನುಷ್ಯ ಎಷ್ಟೇ ಬಲಾಢ್ಯನಾದರೂ ಪರಿಸರದ ಹೊರತಾಗಿ ಬದುಕಲಾರ. ಪರಿಸರ ಅನಂತ ಮತ್ತು ಅಮೋಘವಾದದ್ದು. ಪ್ರಕೃತಿ ಎಲ್ಲರಿಗೂ ಗುರು. ಸೇವಾ ಮನೋಭಾವನೆಯನ್ನೂ ಪ್ರಕೃತಿಯಿಂದಲೇ ಕಲಿಯಬಹುದಾಗಿದೆ ಎಂದು ನುಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ವಹಿಸಿದ್ದರು. ವಿಜ್ಞಾನ ಸಂಘದ ಅಧ್ಯಕ್ಷ ಆದಿತ್ಯ ಹೆಬ್ಬಾರ್ ಸ್ವಾಗತಿಸಿದರು. ಸಂಘದ ಸಂಯೋಜಕ ಡಾ.ಟಿ.ಸುಧಾಕರನ್ ಪ್ರಸ್ತಾವನೆಗೈದರು. ಮತ್ತೋರ್ವ ಸಂಯೋಜಕ ಪ್ರೊ.ದೇವಿಪ್ರಸಾದ್ ಅತಿಥಿಗಳನ್ನು ಪರಿಚಯಿಸಿದರು. ನೇಷರ್ ಕ್ಲಬ್ನ ಅಧ್ಯಕ್ಷೆ ಸೃಜನಾ ವಂದಿಸಿದರು. ತೃತೀಯ ಪದವಿ ವಿದ್ಯಾರ್ಥಿಗಳ ಮಿಲನ ಎಂ ಹಾಗೂ ಪ್ರವೀಣ್ ಕುಮಾರ್ ಬಿ ಕಾರ್ಯಕ್ರಮ ನಿರ್ವಹಿಸಿದರು.