ವಿವೇಕಾನಂದ ವಿಜ್ಞಾನ ವಿಭಾಗಗಳಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮ
ಪುತ್ತೂರು: ಪ್ರಸ್ತುತ ಜೀವನದಲ್ಲಿ ಬಳಸುವ ಉಪಕರಣಗಳ ಪ್ರಮುಖ ಭಾಗ ಚಿಪ್. ಇವುಗಳನ್ನು ತಯಾರಿಸಲು ಐಸಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಐಸಿ ತಂತ್ರಜ್ಞಾನದ ಮಾಹಿತಿಯು ಔದ್ಯೋಗಿಕ ರಂಗದಲ್ಲಿ ಅಗತ್ಯವಿದೆ. ಇವುಗಳನ್ನು ವಿದ್ಯಾರ್ಥಿಗಳು ಪ್ರಾರಂಭದ ಹಂತದಲ್ಲೇ ತಿಳಿಯಬೇಕು ಎಂದು ಶ್ರೀನಿವಾಸ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಸೂರ್ಯನಾರಾಯಣ ಕೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗ ಮತ್ತು ವಿಜ್ಞಾನ ಸಂಘದ ವತಿಯಿಂದ ಆಯೋಜಿಸಿದ ಐಸಿ ಫ್ಯಾಬ್ರಿಕೇಶನ್ ಟೆಕ್ನಾಲಜಿ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಂದು ಮಾತನಾಡಿದರು.
ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆಯಾಗುತ್ತದೆ. ತಂತ್ರಜ್ಞಾನಗಳ ಅಭಿವೃದ್ಧಿ ಹೆಚ್ಚುತ್ತಿದೆ. ವಿದ್ಯಾರ್ಥಿಗಳಿಗೆ ಇವುಗಳ ಮಾಹಿತಿಯಿರಬೇಕು. ಮಾತ್ರವಲ್ಲದೇ ತಂತ್ರಾಂಶಗಳ ಕಾರ್ಯವೈಖರಿಯ ಬಗೆಗಿನ ಮಾಹಿತಿ ಇರಬೇಕು. ವಿದ್ಯಾರ್ಥಿಗಳಿಗೆ ಈ ವಿಚಾರಗಳು ಔದ್ಯೋಗಿಕ ಕ್ಷೇತ್ರದಲ್ಲಿ ಸಹಾಯಕವಾಗುತ್ತದೆ ಎಂದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗ ಉಪನ್ಯಾಸಕ ಶಿವಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿಂಚನ ಸ್ವಾಗತಿಸಿದರು, ವಿದ್ಯಾರ್ಥಿ ಸುಬ್ರಹ್ಮಣ್ಯ.ಕೆ ವಂದಿಸಿ, ನಿರ್ವಹಿಸಿದರು.