ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಡಾ.ಜಯಕುಮಾರ್ ಶೆಟ್ಟಿ
ಪುತ್ತೂರು: ವ್ಯಕ್ತಿಯ ಬೆಳವಣಿಗೆಗೆ ನಿಯಂತ್ರಣ ಅಗತ್ಯ. ದೇಶ ಅಭಿವೃದ್ಧಿ ಸಾಧಿಸಿದ್ದರೂ ಅದು ಜನರನ್ನು ತಲುಪುತ್ತಿಲ್ಲ. ಆನರ ಅಭಿವೃದ್ಧಿ ಕೊಡುಗೆಗಳಿಂದ ಸಾಧ್ಯವಿಲ್ಲ. ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಇದರಿಂದಾಗಿ ಪ್ರಗತಿಪರ ಬೆಳವಣಿಗೆ ಸಾಧಿಸಲು ಸಾಧ್ಯವಾಗುವುದರೊಂದಿಗೆ ನಮ್ಮ ಸುತ್ತಮುತ್ತಲಿನ ಜನರು ನಮ್ಮೊಂದಿಗೆ ಬೆಳೆಯಲು ಸಾಧ್ಯ ಎಂದು ಉಜಿರೆ ಎಸ್.ಡಿ.ಎಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಯಕುಮಾರ ಶೆಟ್ಟಿ ಹೇಳಿದರು.
ಅವರು ವಿವೇಕಾನಂದ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗವು ಕಾಲೇಜಿನ ಸುವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸುತ್ತಿರುವ ಸರಣಿ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಸಹಾರ ಸಂಘಗಳು ಮತ್ತು ಮಾರುಕಟ್ಟೆ ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ದೊಡ್ಡ ಮಟ್ಟದ ಉತ್ಪಾದನೆಯಿಂದ ದೊಡ್ಡ ಮಾರುಕಟ್ಟೆಯನ್ನು ಪಡೆಯಬಹುದು ಎಂಬ ನಿರ್ಧಾರ೪ವನ್ನು ಕೈಬಿಡುವುದರೊಂದಿಗೆ ಸಣ್ಣ ಪ್ರಮಾಣದ ಉತ್ಪಾದನೆಯಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಪಡೆಯಬಹುದು ಎಂಬುದನ್ನು ಕೃಷಿಕರು ತಿಳಿಯಬೇಕು. ಬ್ಯಾಂಕ್ ಖಾತೆ ಇದ್ದವರೆಲ್ಲರೂ ಉಳಿತಾಯ ಮಾಡುವುದಕ್ಕೆ ಸಾಧ್ಯವಿಲ್ಲ. ಅಭಿವೃದ್ಧಿ ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತಿಲ್ಲ ಎಂದು ನುಡಿದರು.
ಆನರ ಜ್ಞಾನದಲ್ಲಿ, ಕೌಶಲ್ಯದಲ್ಲಿ ಹಾಗೂ ಮನೋಧರ್ಮದಲ್ಲಿ ಧನಾತ್ಮಕ ಬದಲಾವಣೆಯಾದರೆ ಮತ್ರ ಅಭಿವೃದ್ಧೀ ಸಾಧ್ಯ. ಸಂಪಾದನೆ ಮಾಡುವ ಸಾಮರ್ಥ್ಯ ಮತ್ತು ಸಂಪಾದಿಸಿದ್ದನ್ನು ಖರ್ಚು ಮಾಡುವ ಸಾಮರ್ಥ್ಯ ಇದ್ದರೆ ಸ್ವಾವಲಂಬನೆ ಸಾಧ್ಯ. ಆಮೂಲಕ ಅಭಿವೃದ್ಧಿಯನ್ನು ಸಾಧಿಸುವುದರೊಂದಿಗೆ ಜನರಿಗೆ ಮಾರುಕಟ್ಟೆಯನ್ನು ನಿಯಂತ್ರಿಸುವ ಕೌಶಲ್ಯ ಅತಿ ಮುಖ್ಯ ಎಂದು ಹಿತನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಜಯರಾಮ ಭಟ್ ಎಂ.ಟಿ. ಮಾತನಾಡಿ ಸ್ವಸಹಾಯ ಸಂಘದ ಮೂಲಕ ವಿವಿಧ ತೆರನಾದ ಕಾರ್ಯಗಳು ನಡೆಯುತ್ತಿದ್ದರೂ ಉತ್ಪನ್ನಗಳ ಮಾರಾಟಕ್ಕೆ ಅಡೆತಡೆಗಳು ಒದಗುತ್ತದೆ. ಇದಕ್ಕಾಗಿ ಸರಿಯಾದ ಮಾರುಕಟ್ಟೆ ಸೌಲಭ್ಯ ಅಗತ್ಯ ಎಂದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಘ್ನೇಶ್ವರ ವರ್ಮುಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕ ವಿಷ್ಣು ಕುಮಾರ್ ಸ್ವಾಗತಿಸಿದರು. ವಿಭಾಗದ ಉಪನ್ಯಾಸಕಿ ಮಲ್ಲಿಕಾ ವಂದಿಸಿ, ನಿರೂಪಿಸಿದರು.