ವಿವೇಕಾನಂದದಲ್ಲಿ ವಾರ್ಷಿಕ ಕ್ರೀಡಾಕೂಟ – ಸಾಧಿಸುವ ಇಚ್ಛೆ ಉಳ್ಳವರಿಗೆ ಕ್ರೀಡೆ ಪೂರಕ: ಜನಾರ್ದನ ಗೌಡ
ಪುತ್ತೂರು : ಸಾಧಿಸುವ ಇಚ್ಚೆಯಿದ್ದವರಿಗೆ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯರಾಗುವ ಅವಶ್ಯಕತೆಯಿದೆ. ಇದರಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯ. ಮಾತ್ರವಲ್ಲದೇ ಅತುತ್ತಮ ಉದ್ಯೋಗಾವಕಾಶಗಳೂ ಸೇರಿದಂತೆ ಉನ್ನತ ವಿದ್ಯಾಭ್ಯಾಸಕ್ಕೂ ಕ್ರೀಡೆಯಲ್ಲಿ ಸಾಧನೆಗೈದವರಿಗೆ ಸ್ಥಾನವನ್ನು ಕಲ್ಪಿಸಲಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಎಎಸ್ಐ ಜನಾರ್ದನ ಗೌಡ ಹೇಳಿದರು.
ಅವರು ಕಾಲೇಜಿನ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಸೋತಾಗ ಕುಗ್ಗಬಾರದು. ಸೋಲು ಎಂಬುದು ಗೆಲುವಿನ ಮೆಟ್ಟಿಲು. ಪ್ರತೀ ಬಾರಿಯು ಹೆಚ್ಚು ಪ್ರಯತ್ನಿಸಿದಾಗ ಯಶಸ್ಸು ಒಲಿಯುತ್ತದೆ. ಅಲ್ಲದೆ ಇದರಿಂದ ಬದುಕಿನಲ್ಲಿಯು ಸಾಧನೆ ಮಾಡಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ದೊರೆತ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ನವೀನ್, ರಾಜೇಶ್,ಮೇಘಾ, ವರ್ಷಿತ್, ರಾಜೇಶ್, ಶಮಂತ್, ಶೋಭಿತ್, ದೀಕ್ಷಾ, ಜಯಶ್ರೀ, ಆಸ್ತಾ ರೈ ಹಾಗು ಅನುಷಾ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ವಿದ್ಯಾಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ಥಿಯನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಶಂಕರನಾರಾಯಣ ಭಟ್.ಕೆ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ವೆಂಕಟರಮಣ ಭಟ್ ಬಿ ಉಪಸ್ಥಿತರಿದ್ದರು. ಕಾಲೇಜಿನ ಕ್ರೀಡಾ ಪಟು ಜಯಶ್ರೀ ಸ್ವಾಗತಿಸಿದರು, ಶೋಭಿತ್ ವಂದಿಸಿದರು. ದೈಹಿಕ ಶಿಕ್ಷಕ ರವಿಶಂಕರ್ ವಿ.ಎಸ್ ನಿರ್ವಹಿಸಿದರು.