ಸ್ತ್ರೀ ಅಡುಗೆ ಮನೆಯ ಸಾಮ್ರಾಜ್ಞಿ : ಡಾ. ಸ್ಮಿತಾ
ಪುತ್ತೂರು: ದಿನ ನಿತ್ಯ ಚಟುವಟಿಕೆಯಲ್ಲಿ ಅಡುಗೆ ಒಂದು ಅವಿಭಾಜ್ಯ ಅಂಗ. ಅದು ಊಟದ ಜೊತೆಗಿನ ಉಪ್ಪಿನ ಕಾಯಿಯಂತೆ. ನಾವು ದಿನನಿತ್ಯ ವಿವಿಧ ರೀತಿಯ ಸ್ವಾದಿಷ್ಟಕರವಾದ ತಿಂಡಿಯನ್ನು ತಿನ್ನಲು ಇಚ್ಚಿಸುತ್ತೇವೆ. ಆ ಸ್ವಾದಿಷ್ಟ ಅಡುಗೆ ಮಾಡುವ ಸ್ತ್ರೀ ಅಡುಗೆ ಮನೆ ಎಂಬ ಸಾಮ್ರಾಜ್ಯದ ಸಾಮ್ರಾಜ್ಞಿ ಎಂದು ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಸ್ಮಿತಾ ತಿಳಿಸಿದರು.
ಅವರು ವಿವೇಕಾನಂದಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿದ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಗಡಿಬಿಡಿ ಅಡುಗೆ ಎಂಬ ವಿಷಯದ ಬಗೆಗೆ ಮಾತಾಡಿದರು.
ಸುಮಯ್ಯಾ ಕೆ ವಿ, ಅಜ಼ಾದ್, ಅರುಣ್, ಪ್ರಜ್ಞಾ ಬಾರ್ಯ, ಅಕ್ಷತಾ ಆಚಾರ್ಯ, ಯಶಸ್ವಿನಿ ತಾಳೆಪ್ಪಾಡಿ, ಓಂ ಪ್ರಕಾಶ್, ಪ್ರೆಸಿಲ್ಲಾ ಒಲಿವಿಯಾ ಡಾಯಸ್, ಕಾರ್ತಿಕ, ಅಂಕಿತಾ ರೈ, ದಿನೇಶ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು. ಸೌಮ್ಯ ಶ್ರೀ ನಿಡ್ಡಾಜೆ ಕಾರ್ಯಕ್ರಮ ನಿರೂಪಿಸಿದರು.