VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿ ಸಂಘಕ್ಕಾಗಿ ಚುನಾವಣೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಅಂತಿಮ ಬಿ.ಕಾಂ ನ ನಿಧೀಶ್ ಉಡುಪ ಆಯ್ಕೆಯಾದರು. ಕಾರ್ಯದರ್ಶಿಯಾಗಿ ತೃತೀಯ ಬಿಕಾಂನ ನಿರೋಶ್ ಪಿ.ಜಿ ಆಯ್ಕೆಯಾದರೆ, ಜತೆಕಾರ್ಯದರ್ಶಿಯಾಗಿ ಅಂತಿಮ ಬಿ.ಎ ಯ ಸ್ವಾತಿ ಆಚಾರ್ಯ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ನಾಯಕನಾಗಿ ಒಬ್ಬಾತ ಮಾತ್ರ ಆಯ್ಕೆಯಾಗುತ್ತಾನಾದರೂ ಎಲ್ಲರಲ್ಲೂ ನಾಯಕತ್ವದ ಗುಣಗಳಿವೆ.ಂತಹ ಉದಾತ್ತ ಗುಣಗಳನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು ಎಂದರು.

       ಪ್ರಸ್ತುತ ವರ್ಷ ವಿವೇಕಾನಂದ ಕಾಲೇಜಿಗೆ ಅತ್ಯಂತ ಸಂಭ್ರಮದ ವರ್ಷ. ಕಾಲೇಜಿನ ಐವತ್ತನೇ ವರ್ಷಾಚರಣೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ತೊಡಗುವಿಕೆಯೂ ಮುಖ್ಯ. ಈ ಹಿನ್ನಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟಾಗಿ ಈ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುವಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಪ್ರಯತ್ನಿಸಬೇಕು. ವ್ಯಕ್ತಿತ್ವದ ಬೆಳವಣಿಗೆಗೆ ವಿದ್ಯಾರ್ಥಿ ಸಂಘದ ನಾಯಕತ್ವ ಪೂರಕವಾಗಬೇಕು. ಪ್ರಜಾಪ್ರಭುತ್ವದ ಕಲ್ಪನೆ ವಿದ್ಯಾಥಿಗಳಲ್ಲಿ ಒಡಮೂಡುವಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಸಹಕಾರಿ ಎಂದು ನುಡಿದರು.

       ಪ್ರಾಧ್ಯಾಪಕರಾದ ಪ್ರೊ.ಕೃಷ್ಣ ಕಾರಂತ, ಡಾ.ವಿಘ್ನೇಶ್ವರ ವರ್ಮುಡಿ, ಕ್ಯಾ.ಡಿ.ಮಹೇಶ್ ರೈ, ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಪ್ರೊ.ವೆಂಕಟ್ರಮಣ ಭಟ್, ಉಪನ್ಯಾಸಕಿಯರಾದ ರವಿಕಲಾ, ಹರಿಣಿ ಮೊದಲಾದವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.